Site icon PowerTV

ಗ್ಯಾಂಗ್​ ವಾರ್​​ನಲ್ಲಿ ಮಚ್ಚಿನೇಟಿಗೆ ಕೈ ಕಟ್​​​..!

ಬೆಂಗಳೂರು : ಕುಡಿದ ನಶೆಯಲ್ಲಿ 2 ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಪರಿಣಾಮ ಪ್ರಜ್ವಲ್ ಎಂಬ ಯುವಕ ಬಲಗೈ ಕಟ್‌ ಆದ ಘಟನೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ನಡೆದಿದೆ.

ಬಾರ್​​ನಲ್ಲಿ ಮದ್ಯಪಾನದ ವೇಳೆ ಗಲಾಟೆ ಶುರುವಾಗಿದ್ದು, ಬಾರಿಗೆ ಕಾರಲ್ಲಿ ಎಂಟ್ರಿ ಕೊಟ್ಟಿದ್ದ ಗ್ಯಾಂಗ್‌ ಜೊತೆ ಪ್ರಜ್ವಲ್ ಕಿರಿಕ್ ಮಾಡಿಕೊಂಡಾಗ ಎದುರಾಳಿ ಟೀಂನವರು ಪ್ರಜ್ವಲ್ ಮೇಲೆ ಮಚ್ಚು ಬೀಸುತ್ತಾರೆ ಇದರ ಪರಿಣಾಮ ಒಂದೇ ಏಟಿಗೆ ಪ್ರಜ್ವಲ್ ಬಲಗೈ ಕಟ್ ಆಗಿ ಬಿದ್ದಿತ್ತು, ತುಂಡಾದ ಕೈಯನ್ನು ಬೀದಿನಾಯಿಯು ಕಚ್ಚಿಕೊಂಡು ಹೋಗುತ್ತದೆ.

ಇನ್ನು, ಪ್ರಜ್ವಲ್ ಜೊತೆಗಿದ್ದ ಮೇಘರಾಜ್, ಯೋಗೇಶ್​ ಹಾಗೂ ಕೌಶಿಕ್ ಎಸ್ಕೇಪ್‌ ಆಗುತ್ತಾರೆ. ನಂತರ ಪ್ರಜ್ವಲ್​ ಅನ್ನು ಕೆಲ ಸ್ನೇಹಿತರು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸುತ್ತಾರೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಸೆರೆಯಾದ ದೃಶ್ಯದ ಆಧಾರದ ಮೇಲೆ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Exit mobile version