Site icon PowerTV

ನಟ ಸೃಜನ್ ಲೋಕೆಶ್ ಹಾಗೂ ಅರುಣ್ ಸೋಮಣ್ಣ ಟೀಮ್ ನಡೆದ ಘಲಾಟೆಗೆ ಕಾರಣವೇನು..?

ಬೆಂಗಳೂರು: ಸಚಿವ ವಿ ಸೋಮಣ್ಣ ಮಗ ಅರೂಣ್ ಸೋಮಣ್ಣ ಹಾಗೂ ನಟ ಸೃಜನ್ ಲೋಕೆಶ್ ಟೀಮ್ ಜೊತೆಗೆ ಗಲಾಟೆ. ಸೋಮವಾರ ರಾತ್ರಿ ಬೆಂಗಳೂರಿನ ಮುದ್ದಿನ ಪಾಳ್ಯದ ಕಿಂಗ್ಸ್ ಕ್ಲಬ್​ನಲ್ಲಿ ಘಟನೆ ನಡೆದಿದೆ.

ಅಪ್ಪು ಕಪ್ ( ಬ್ಯಾಡ್ಮಿಂಟನ್ ಟೂರ್ನಮೆಂಟ್) ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿತ್ಯ ಪ್ರಾಕ್ಟಿಸ್ ನಡೆಸುತ್ತಿರೊ ಸೃಜನ್ ಲೋಕೇಶ್ ಟೀಮ್. ಈ ಹಿನ್ನಲೆ ಪ್ರಾಕ್ಟೀಸ್ ಮುಗಿದ ಬಳಿಕ ರಾತ್ರಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮಾಡುವ ವೇಳೆ ಏರು ದ್ವನಿಯಲ್ಲಿ ಕಿರುಚಾಡುತ್ತಿದ್ದ ಟೀಮ್.

ಈ ವೇಳೆ ಅರೂಣ್ ಸೋಮಣ್ಣ ಮತ್ತೆ ಕ್ಲಬ್ ಗೆ ಬಂದಿದ್ದಾರೆ. ಯಾಕೆ ಜೋರಾಗಿ ಗಲಾಟೆ ಮಾಡ್ತಿರಾ ಎಂದು ಕೇಳಿದ್ದ ಅರೂಣ್ ಸೋಮಣ್ಣ. ಈ ವೇಳೆ ಎರಡೂ ಗುಂಪಿನ ನಡುವೆ ಗಲಾಟೆ.ಮಾತು ಮಾತಿಗೆ ಶುರುವಾಗಿ ನಂತ್ರ ಹೊಡೆದಾಟ. ಪರಸ್ಪರ ಎರಡೂ ಟೀಮ್ ನವರು ಹೊಡೆದಾಡಿಕೊಂಡಿದ್ದಾರೆ.ಘಟನೆಯಲ್ಲಿ ಸೃಜನ್ ಲೋಕೇಶ್, ಅರ್ಜುನ್ ಸೇರಿ ಹಲವಾರು ಜನರು ಇರುವ ಮಾಹಿತಿ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version