Site icon PowerTV

ಟೈರ್ ಸ್ಪೋಟಗೊಂಡು ಸುಟ್ಟು ಕರಕಲಾದ ಟಿಪ್ಪರ್

ಕಾರವಾರ; ಜೆಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಟೈರ್ ಸ್ಪೋಟಗೊಂಡು ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಕುಮಟಾ ಸಿದ್ದಾಪುರ ಮಾರ್ಗದ ಹುಲ್ದಾರ್ ಗ್ರಾಮದ ಬಳಿ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕು ರಸ್ತೆ ಡಾಂಬರೀಕರಣಕ್ಕೆ ಜೆಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ದೊಡ್ಮನೆ ಘಟ್ಟದಲ್ಲಿ ಚಲಿಸುತ್ತಿದ್ದ ವೇಳೆ ಏಕಾಏಕಿ ಟೈರ್ ಸ್ಪೋಟಗೊಂಡು ಈ ಅವಘಡ ಸಂಭವಿಸಿದೆ.

ಅದೃಷ್ಟವಶಾತ್ ಟಿಪ್ಪರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮುರ್ಡೇಶ್ವರ ಮೂಲದ ಟಿಪ್ಪರ್ ಜಲ್ಲಿಕಲ್ಲು ಹೊತ್ತು ಸಾಗುತ್ತಿತ್ತು ವೇಳೆ ಈ ಅವಘಡ ಸಂಭವಿಸಿದೆ. ಬೆಂಕಿ ನಂದಿಸಲು ಸಾಧ್ಯವಾಗದ ಹಿನ್ನಲೆ ಸಂಪೂರ್ಣ ಟಿಪ್ಪರ ಸುಟ್ಟು ಕರಕಲಾಗಿದ್ದು, ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Exit mobile version