Site icon PowerTV

ಸಿದ್ದರಾಮಯ್ಯ ಮಹಾ ಸುಳ್ಳ: ಶ್ರೀ ರಾಮುಲು

ರಾಯಚೂರು : ಸಿದ್ದರಾಮಯ್ಯ ಮಹಾ ಸುಳ್ಳ. ಸುಳ್ಳೇ ಅವರ ಮನೆ ದೇವರು ಎಂದು ಸಿದ್ದರಾಮಯ್ಯ ವಿರುದ್ಧ ಸಾರಿಗೆ ಸಚಿವ ಶ್ರೀರಾಮುಲು ವಾಗ್ದಾಳಿ ಮಾಡಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ರಾಜ್ಯದ ಹಿಂದುಳಿದ ಸಮುದಾಯದವರು ರೋಸಿ ಹೋಗಿದ್ದಾರೆ. SC, ST ಜನಾಂಗ ಸಿದ್ದರಾಮಯ್ಯರನ್ನ ನಂಬುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನ ತಿರಸ್ಕರಿಸುತ್ತಾರೆ ಎಂದು ಹೇಳಿದರು.

ಪಂಚ ವಾರ್ಷಿಕ ಯೋಜನೆ ಮಾಡಿಕೊಳ್ತಿದ್ರು. ಅಹಿಂದ, ಹಿಂದುಳಿದ ನಾಯಕ ಅನ್ನುವಂಥದ್ದು. ಕೇವಲ ಚುನಾವಣೆ ಸಮಯದಲ್ಲಿ ಯಾಕೆ ನಿನಗೆ ಬರ್ತಾವೆ? ಸಿದ್ದರಾಮಯ್ಯ ಮನಸ್ಸು ಮಾಡಿದರೆ ಆಯೋಗ ರಚನೆ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಬಿಜೆಪಿ ಮೀಸಲಾತಿ ಕೊಟ್ಟಂತ ಪಾರ್ಟಿ. ಸಿದ್ದರಾಮಯ್ಯಗೆ ವಿನಂತಿ ಮಾಡುತ್ತೇನೆ. ನೀವು ಅಹಿಂದ, ಹಿಂದುಳಿದ ನಾಯಕ ಅನ್ನೋದನ್ನ ವಿರೋಧಿಸುತ್ತೇನೆ. ರಾಹುಲ್ ಗಾಂಧಿ, ಡಿ.ಕೆ ಶಿವಕುಮಾರ, ಸಿದ್ಧರಾಮಯ್ಯರನ್ನ ಕೈ ಹಿಡಿದು ಓಡಿಸಿದ್ರು. ಡಿಕೆಶಿ, ಸಿದ್ದರಾಮಯ್ಯ ಇಬ್ಬರು ಗೊಲ್ಲ ಸಮುದಾಯದವರಿಗೆ ಅವಮಾನಿಸಿದ್ದಾರೆ ಎಂದು ಕಿಡಿಕಾರಿದರು.

Exit mobile version