Site icon PowerTV

ಕಟೀಲು ಒಬ್ಬ ಪೊಲಿಟಿಕಲ್ ಜೋಕರ್ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಪ್ರತಿಪಕ್ಷದ ನಾಯಕರುಗಳು ಒಬ್ಬರ ಮೇಲೊಬ್ಬರಂತೆ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.

ಇನ್ನು ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಹೇಳಿಕೆ ನೀಡಿರುವ ಸಂಸದ ನಳೀನ್ ಕುಮಾರ್ ರವರ ಹೇಳಿಕೆ ಸಿದ್ದರಾಮಯ್ಯ ರವರು ಗರಂ ಆಗಿದ್ದಾರೆ. ಸಿದ್ದರಾಮಯ್ಯ ಹಗರಣ ಫೈಲ್ ನನ್ನ ಬಳಿ ಇದೆ ಎಂಬ ಕಟೀಲು ಹೇಳಿಕೆ ವಿಚಾರವಾಗಿ ಮಾತನಾಡಿದ ಸಿದ್ದು, ಕಟೀಲು ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ.

ಕಟೀಲು ಒಬ್ಬ ಪೊಲಿಟಿಕಲ್ ಜೋಕರ್. ನನ್ನ ಫೈಲ್ ಇವರ ಬಳಿ ಇದ್ದಿದ್ರೆ, ಮೂರು ವರ್ಷ ಬೇಕಿತ್ತಾ..?ಅವರು ಉಪ್ಪಿನ ಕಾಯಿ ನೆಕ್ಕು ತಿನ್ತಿದ್ರಾ..? ಎಂದು ಸಂಸದರ ವಿರುದ್ದ ಗರಂ ಆಗಿದ್ದಾರೆ.

Exit mobile version