Site icon PowerTV

ಬಿಜೆಪೆ: ಪಕ್ಷಕ್ಕೆ ಸೇರುವವರಿಗೆ ಸ್ವಾಗತ ಕೋರಿದ ಸಚಿವ ಕೆ.ಸಿ. ನಾರಾಯಣ ಗೌಡ..!

ಶಿವಮೊಗ್ಗ: ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ ಹೇಳಿಕೆ. ಬಿಜೆಪಿಗೆ ಬರುವವರನ್ನು ಬೇಡ ಎನ್ನಲು ಆಗಲ್ಲ ಎಂದು ಹೇಳೀಕೆ ನೀಡಿದ್ದಾರೆ.

ಇಮದು ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಕೆ.ಸಿ. ನಾರಾಯಣ ಗೌಡ ರವರು,  ಮುಂದಿನ 25 ವರ್ಷ ಕಾಲ ಬಿಜೆಪಿಯೇ ಅಧಿಕಾರ ನಡೆಸಲಿದೆ. ಯಡಿಯೂರಪ್ಪ ಉತ್ತಮ ಆಡಳಿತ ನಡೆಸಿದ್ದಾರೆ. ಬೊಮ್ಮಾಯಿ ಸಹ ಉತ್ತಮ ಆಡಳಿತ ನೀಡುತ್ತಿದ್ದಾರೆ. ನಮ್ಮ ಆಡಳಿತದ ಮಾದರಿ ನೋಡಿ ಪಕ್ಷಕ್ಕೆ ಬರುವವರಿದ್ದಾರೆ. ಯಾರು ಆಪರೇಶನ್ ಮಾಡಿದ್ದಾರೆ ಎಂಬುದು ಗೊತ್ತಿದೆ.

ನಾವು 17 ಜನ ಹಣ ತೆಗೆದುಕೊಂಡು ಬಂದಿಲ್ಲ. ನಾವು ಹಣ ತೆಗೆದುಕೊಂಡು ಪಕ್ಷಕ್ಕೆ ಬಂದಿದ್ದೇವೆ ಎಂದು ಸಾಕ್ಷಿ ನೀಡಲಿ. ನರೇಂದ್ರ ಮೋದಿ ಆಡಳಿತ ನೋಡಿ ಬಂದಿದ್ದೇವೆ. ಬಿಜೆಪಿ ನೀತಿ, ನಿಯಮ ನೋಡಿ ಬಂದಿದ್ದೇವೆ. ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ನಮ್ಮ ಸರ್ಕಾರ ನೀಡಿದೆ. ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚೆ ನಡೆಯುತ್ತಿದೆ ಅದರ ಬಗ್ಗೆ ಮುಂದೆ ತಿಳಿಸಲಾಗುವುದು ಎಂದು ಹೆಳಿದ್ದಾರೆ.

Exit mobile version