Site icon PowerTV

ಶ್ರೀಗಳ ಆತ್ಮಹತ್ಯೆ ಸಂಬಂಧ ಸಚ್ಚಿದಾನಂದ ಮೂರ್ತಿಗೆ ನೋಟಿಸ್

ರಾಮನಗರ: ಬಂಡೇಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್ ದಿನೆ ದಿನೇ ಹೊಸ ತಿರುವು ಪಡೆಯುತ್ತಿದೆ. ಪ್ರಕರಣ ಸಂಬಂಧ ಸಚ್ಚಿದಾನಂದ ಮೂರ್ತಿಗೆ ನೋಟಿಸ್ ನೀಡಲಾಗಿದೆ.

ಸಚ್ಚಿದಾನಂದ ಮೂರ್ತಿಗೆ ಈಗಾಗಲೇ ಮಾಗಡಿ ಪೋಲಿಸರಿಂದ ನೋಟಿಸ್ ನೀಡಲಾಗಿದೆ. ಡೆತ್ ನೋಟ್ ನಲ್ಲಿ ಸಚ್ಚಿದಾನಂದ ಮೂರ್ತಿ ಹೆಸರು ಪ್ರಸ್ತಾಪ ಹಾಗೂಸಿಡಿಗಳನ್ನು ಸಚ್ಚಿದಾನಂದನಿಗೆ ತಲುಪಿಸಿದ ಹಿನ್ನಲೆ ನೋಟಿಸ್ ನೀಡಲಾಗಿದೆ ಎಮದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುವ ನಿಟ್ಟನಿಲ್ಲಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಪೋಲಿಸರು. ಸಚ್ಚಿದಾನಂದ ಮೂರ್ತಿ ವೀರಶೈವ ಸಮಾಜದ ಮುಖಂಡ ಹಾಗೂ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿಯಾಗಿದ್ದಾರೆ.

Exit mobile version