Site icon PowerTV

ಬಿಜೆಪಿ ಶಾಸಕ ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆ.?

ದಾವಣಗೆರೆ; ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರ ಅಣ್ಣನ ಮಗ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಶಾಸಕ ರೇಣುಕಾಚಾರ್ಯ ಸಹೋದರ ರಮೇಶ್​ ಅವರ ಮಗ ಚಂದ್ರಶೇಖರ್​ ಅವರು ಸ್ವಾಮೀಜಿ ಭೇಟಿಯಾಗಿ ಬರುವುದಾಗಿ ಹೋಗಿದ್ದ ಚಂದ್ರಶೇಖರ್​ ಕಳೆದ ಎರಡು ದಿನಗಳಿಂದ ಕುಟುಂಬಸ್ಥರ ಸಂಪರ್ಕ ಬಂದಿಲ್ಲ.

ವಿನಯ್ ಗುರುಗಳ ಹತ್ರ ಹೋಗಿ ಆಶೀರ್ವಾದ ಪಡೆದು ಹೊನ್ನಾಳಿ ಹೋಗ್ತೇನೆ ಅಂತ ಹೋದವನು ಶಾಂತಲಾ ಟಾಕೀಸ್ ಹತ್ರ ಕಾರ್ ಸಮೇತ ನಾಪತ್ತೆಯಾಗಿದ್ದಾನೆ. ಬೇರೆ ಕಡೆ ಹೋಗಿರಬಹದು ಬರುತ್ತಾನೆ ಎಂದು ಎರಡು ದಿನ ಕಳೆದರು ಬರದಿದ್ದಾಗ ನಿನ್ನೆ ರಾತ್ರಿಯಿಂದ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ.

ಇನ್ನು ಮೊನ್ನೆ ರಾತ್ರಿಯಿಂದ ಚಂದ್ರಶೇಖರ್​ ನಾಪತ್ತೆಯಾದ ಹಿನ್ನಲೆಯಲ್ಲಿ ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಿಂದ ಅರ್ಧಕ್ಕೆ ಮೊಟಕುಗೊಳಿಸಿ ರೇಣುಕಾಚಾರ್ಯ ಅವರು ತೆರಳಿದ್ದಾರೆ.

Exit mobile version