Site icon PowerTV

ಫಿಲ್ಮ್ ಚೇಂಬರ್ ನಲ್ಲಿ ಕಳೆಗಟ್ಟಿದ ಕನ್ನಡ ರಾಜ್ಯೋತ್ಸವ

ಬೆಂಗಳೂರು: ಕನ್ನಡ ರಾಜ್ಯೋತ್ಸವವನ್ನು ಎಲ್ಲೆಡೆ ಅದ್ದೂರಿಯಾಗಿ ಆಚರಣೆ ನಡೆಸಲಾಗುತ್ತಿದ್ದು, ಫಿಲ್ಮ್ ಚೇಂಬರ್ ನಲ್ಲಿ ಕಳೆಗಟ್ಟಿದ ಕನ್ನಡ ರಾಜ್ಯೋತ್ಸವದ ಸಂಭ್ರಮ.

ಫಿಲ್ಮ್ ಚೇಂಬರ್​ನಲ್ಲಿ ಬಹಳ ಅದ್ದೂರಿಯಾಗಿ ಕನ್ನಡ ಸಂಭ್ರಮವನ್ನು ಅದ್ದೂರಿಯಾಗಿ ಆಚರಣೆ ನಡೆಸಲಾಗಿದೆ. ಕನ್ನಡ ಭಾವುಟಗಳ ಕಂಪಲ್ಲಿ ತಾಯಿ ಭುವನೇಶ್ವರಿಯ ಹಬ್ಬ ಜೋರಾಗಿದೆ. ಫಿಲ್ಮ್ ಚೇಂಬರ್ ಮುಂಭಾಗ ಡಾ.ರಾಜ್ ಪುತ್ಥಳಿಗೆ ಹೂವಿನ ಮಾಲೆಯನ್ನು ಅರ್ಪಿಸಲಾಗಿದೆ.

ಇನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅರುಂಧತಿ ನಾಗ್ ಆಗಮಿಸಿದ್ದರು. ಫಿಲ್ಮ್ ಚೇಂಬರ್ ಅಧ್ಯಕ್ಷ ಭಾಮಾ ಹರೀಶ್, ಸುಂದರ್ ರಾಜ್ ,ಎ ಚಿನ್ನೇಗೌಡ್ರು ಸೇರಿದಂತೆ ಫಿಲ್ಮ್ ಚೇಂಬರ್ ಪಧಾದಿಕಾರಿಗಳ ಸಮ್ಮುಖದಲ್ಲಿ ಕನ್ನಡ ಹಬ್ಬ ಆಯೋಜನೆ ಮಾಡಲಾಯಿತು.

Exit mobile version