Site icon PowerTV

ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ

ಬೆಳಗಾವಿ : ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ರಂಗೇರುತ್ತಿದ್ದು, ಕನ್ನಡ ಬಾವುಟ, ಕಟೌಟ್‌ ಎಲ್ಲೆಡೆ ರಾರಾಜಿಸುತ್ತಿದೆ.

ನಗರದಲ್ಲಿ ಚೆನ್ನಮ್ಮ ವೃತ್ತ ಸೇರಿದಂತೆ ಹಲವು ವೃತ್ತದಲ್ಲಿ ಅಲಂಕಾರ ಮಾಡಲಾಗಿದ್ದು, ರಾಜ್ಯೋತ್ಸವ ಜೊತೆಗೆ ಅಪ್ಪು ಉತ್ಸವಕ್ಕೆ ಸಿದ್ಧತೆ ನಡೆಸಲಾಗಿದೆ. ಇನ್ನು, ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಅಧಿಕ ಜನರು ಸೇರುವ ಸಾಧ್ಯತೆ ಇದ್ದು, ಬೆಳಗಾವಿ , ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಯ ಅಭಿಮಾನಿಗಳು ಬರುವ ಸಾಧ್ಯತೆ ವ್ಯಕ್ತವಾಗುತ್ತಿದೆ. ಹಾಗೆನೇ DJ ಹಾಡಿಗೆ ಕನ್ನಡಾಭಿಮಾಗಳು ಕುಣಿದು ಕುಪ್ಪಳಿಸಿದ್ದಾರೆ.

Exit mobile version