Site icon PowerTV

ಮಿನಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ದುರ್ಮರಣ

ಕಲಬುರಗಿ; ಹೊಲಕ್ಕೆ ಬಿತ್ತಲು ಹೋಗುವಾಗ ಮಿನಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವೀಗಿಡಾದ ಘಟನೆ ಜಿಲ್ಲೆಯ ಆಳಂದ ತಾಲ್ಲೂಕಿನ ಮೋಘಾ ಕೆ ಗ್ರಾಮದಲ್ಲಿ ನಡೆದಿದೆ.

ಪ್ರಕಾಶ್ ಬನಸೂಡೆ (32) ವಿನೋದ್ ಜಮಾದಾರ್ (10) ಮೃತರಾದವರು. ವಿನೋದ್ ತನ್ನ ತಂದೆ ಹೊಲದಲ್ಲಿ ಕೆಲಸ ಮಾಡ್ತಿದ್ದ ಹಿನ್ನಲೆ ಹೊಲಕ್ಕೆ ಊಟ ತೆಗೆದುಕೊಂಡು ಟ್ರ್ಯಾಕ್ಟರ್‌ನಲ್ಲಿ ಹೊರಟಿದ್ದ ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ.

ಬೆಳಗ್ಗೆ ಜೋಳ ಬಿತ್ತನೆ ಮಾಡೋದಕ್ಕೆ ಮಿನಿ ಟ್ರ್ಯಾಕ್ಟರ್ ನಲ್ಲಿ ಹೊಲಕ್ಕೆ ತೆರಳ್ತಿದ್ದರು. ದಿಬ್ಬದ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಹೊರಬಾರದೆ ಇಬ್ಬರು ಸ್ಥಳದಲ್ಲೆ ಸಾವೀಗಿಡಾಗಿದ್ದಾರೆ. ಈ ಬಗ್ಗೆ ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version