Site icon PowerTV

ಈ ಬಾರಿ ಸಿದ್ದರಾಮಯ್ಯಗೆ ಟಿಕೆಟ್​​ ಸಿಗಲ್ಲ: ನಳೀನ್​​ ಕುಮಾರ್​​ ಕಟೀಲ್​​​

ಬಾಗಲಕೋಟೆ : ಕಾಂಗ್ರೆಸ್​​ನಲ್ಲಿ ಈ ಸಾರಿ ಸಿದ್ದರಾಮಯ್ಯಗೆ ಕಂಡಿತವಾಗಿಯೂ ಟಿಕೆಟ್ ಕೊಡಲ್ಲ. ಖರ್ಗೆ ಅವರು ಸ್ವಾಭಿಮಾನಿ ನಾಯಕ ಅಂತಾದ್ರೆ ಸಿದ್ದರಾಮಯ್ಯರನ್ನ ರಾಜಕೀಯವಾಗಿ ಮುಗಿಸ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​​ ಕುಮಾರ್​​ ಕಟೀಲ್​​​ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರ ಭಯ ಬಿಜೆಪಿಗೆ ಇಲ್ಲ. ಅವರು ಇದ್ರೆ ನಮಗೆ ಬಹಳ ಖುಷಿ. ಬಿಜೆಪಿ ಹೆಚ್ಚು ವೋಟ್ ಬರುವುದೇ ಸಿದ್ದರಾಮಯ್ಯ ಮಾತಿನಿಂದ ಹಾಗೂ ಎಲ್ಲಿಯವರೆಗೆ ರಾಹುಲ್ ಇರ್ತಾರೋ ಅಲ್ಲಿಯವರೆಗೆ ಕೇಂದ್ರದಲ್ಲಿ ಬಿಜೆಪಿ ಇರುತ್ತೆ, ಹಾಗೆಯೇ ಎಲ್ಲಿಯವರೆಗೆ ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ಇರ್ತಾರೋ ಅಲ್ಲಿಯವರೆಗೆ ರಾಜ್ಯದಲ್ಲಿ ಬಿಜೆಪಿ ಗೆಲ್ಲುತ್ತೆ ಎಂದರು.ಬಿಜೆಪಿ

ಕಳೆದ ಬಾರಿ ಅಧಿಕಾರದಲ್ಲಿದ್ರೂ ಸಹ ಸಿದ್ದರಾಮಯ್ಯ ಚಾಮುಂಡಿ ಕ್ಷೇತ್ರದಲ್ಲಿ ಸೋಲುಂಡ್ರು. ಸಿದ್ದರಾಮಯ್ಯ ಜೊತೆಗೆ ರಾಜ್ಯದ ಜನರಿಲ್ಲ. ಬಾದಾಮಿಯಲ್ಲೂ ನಿಲ್ಲುವ ಪರಿಸ್ಥಿತಿ ಅವರಿಗೆ ಇಲ್ಲ. ಮಾಜಿ ಸಿಎಂ ಆಗಿ ಇಂದು ಕ್ಷೇತ್ರ ಹುಡುಕಾಡ್ತಾ ಇದ್ದಾರೆ ಎಂದು ಕಟೀಲ್​​ ಲೇವಡಿ ಮಾಡಿದ್ರು.

Exit mobile version