Site icon PowerTV

ಗುಜರಾತ್ ತೂಗು ಸೇತುವೆ ಕುಸಿತ ಕೇಸ್​; 9 ಜನರ ಬಂಧನ

ಗುಜರಾತ್‌; ಗುಜರಾತ್​​ನ ಮೋರ್ಬಿಯಲ್ಲಿ ತೂಗು ಸೇತುವೆ ಕುಸಿದು 141 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಒಂದು ದಿನದ ನಂತರ ಒಂಬತ್ತು ಜನರನ್ನು ಬಂಧಿಸಲಾಗಿದೆ. ಈ ತೂಗು ಸೇತುವೆಯನ್ನು ನಿರ್ಮಾಣ ಮಾಡಿದ ಒರೆವಾ ಕಂಪನಿಯ ಅಧಿಕಾರಿಗಳು, ಟಿಕೆಟ್ ಮಾರಾಟಗಾರರು ಮತ್ತು ಭದ್ರತಾ ಸಿಬ್ಬಂದಿ ಸೇರಿದ್ದಾರೆ.

ಗುಜರಾತ್ ಮೂಲದ ಒರೆವಾ ಅವರು ಈ ತೂಗು ಸೇತುವೆಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸೇತುವೆಯನ್ನು ಸಾರ್ವಜನಿಕರಿಗೆ ಮತ್ತೆ ತೆರೆದ ನಾಲ್ಕು ದಿನಗಳ ನಂತರ ಭಾರಿ ದುರಂತಕ್ಕೆ ಕಾರಣವಾಯಿತು.

ಮಾರ್ಚ್‌ನಲ್ಲಿ ಸೇತುವೆಯ ದುರಸ್ತಿ ಕಾರ್ಯಕ್ಕಾಗಿ ಓರೆವಾ ಸಂಸ್ಥೆಯನ್ನ ನೇಮಿಸಲಾಯಿತು. ಏಳು ತಿಂಗಳ ನಂತರ ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷ ದಿನವನ್ನ ಆಚರಿಸಿದಾಗ ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲಾಯಿತು.

Exit mobile version