Site icon PowerTV

ಗುಜರಾತ್‌ ಮೊರ್ಬಿ ಕೇಬಲ್‌ ಬ್ರಿಡ್ಜ್‌ ಕುಸಿತ 132ಕ್ಕೂ ಹೆಚ್ಚು ಜನ ಸಾವು

ಗಾಂಧಿನಗರ: ಗುಜರಾತ್‌ನ ಮೊರ್ಬಿಯ ಮಚ್ಚು ನದಿಯ ಮೇಲೆ ನಿರ್ಮಿಸಲಾದ ಸುಮಾರು ಶತಮಾನಗಳಷ್ಟು ಹಳೆಯದಾದ ತೂಗು ಸೇತುವೆ ಅಕ್ಟೋಬರ್‌ 30 ರಂದು ಕುಸಿದಿದ್ದು. ಸೇತುವೆ ಮೇಲಿದ್ದ ಹಲವರು ನದಿಗೆ ಬಿದ್ದಿದ್ದಾರೆ.

ಇನ್ನು ಕಳೆದ ವಾರವಷ್ಟೇ ನವೀಕರಣಗೊಂಡಿದ್ದ ಸೇತುವೆ ಕುಸಿಯಲು ಕಾರಣವೇನು ಎನ್ನುವುದು ಹಲವರ ಪ್ರಶ್ನೆಯಾಗಿದ್ದು, ಮಾಹಿತಿಯ ಪ್ರಕಾರ ಹೆಚ್ಚು ಜನರು ಸೇತುವೆ ಮೇಲೆ ಜಮಾಯಿಸಿದ್ದರಿಂದ ಓವರ್ ಲೋಡ್ ಆಗಿ ಸೇತುವೆ ಕುಸಿದುಬಿದ್ದಿದೆ ಎನ್ನಲಾಗಿದೆ.

ಮೋರ್ಬಿಯಲ್ಲಿರುವ ಕೇಬಲ್ ಸೇತುವೆಯು ಐತಿಹಾಸಿಕವಾದದ್ದು. ಕಳೆದ ವಾರ ಅದನ್ನು ನವೀಕರಿಸಲಾಗಿತ್ತು. ನವೀಕರಣದ ನಂತರ, ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ದಿನದಂದು ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಟಿಕೆಟ್ ಖರೀದಿಸಿ ಸೇತುವೆ ವೀಕ್ಷಿಸಿ ಆಗಮಿಸಿದ್ದರು. ಸಿಬ್ಬಂದಿ ಇಡೀ ದಿನ 675 ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Exit mobile version