Site icon PowerTV

ಬಡ ಮನೆ ಮಾಲೀಕರ ರಕ್ತ ಹೀರುತ್ತಿದ್ದಾರಾ ಬೆಸ್ಕಾಂ ಅಧಿಕಾರಿಗಳು..?

ಬೆಂಗಳೂರು : ಒಂದು ತಿಂಗಳಿಗೆ ಬರೋಬ್ಬರಿ 22 ಸಾವಿರ ಕರೆಂಟ್ ಬಿಲ್ ಬಂದ ಘಟನೆ ಬನ್ನೇರುಘಟ್ಟ ರೋಡ್ ದೊಡ್ಡ ಕಮ್ಮನಹಳ್ಳಿ ಬಿಬಿಎಂಪಿ 15 th ಕ್ರಾಸ್​​ನಲ್ಲಿ ನಡೆದಿದೆ.

ತಿಂಗಳ ವಿದ್ಯುತ್ ಬಿಲ್ ನೋಡಿ ಶಾಕ್ ಆದ ಮನೆ ಮಾಲೀಕ. ಬೆಸ್ಕಾಂ ಸಿಬ್ಬಂದಿ ಯಡವಟ್ಟಿಗೆ ಮನೆ ಮಾಲೀಕ ಪೇಚಿಗೆ ಸಿಲುಕಿದ್ದಾರೆ. ಹಳೆ ಬಿಲ್ ನಲ್ಲಿ 219, 241, 265 ರೂ ಬರ್ತಿದ್ದ ಕರೆಂಟ್ ಬಿಲ್ ದಿಢೀರ್‌ ಏರಿಕೆ ಕಂಡಿದೆ.

ಫೆಬ್ರವರಿ 2022 ರಲ್ಲಿ ಬಂದ ಬಿಲ್- 219 ರೂ.
ಮಾರ್ಚ್ 2022 ರಲ್ಲಿ ಬಂದ ಕರೆಂಟ್ ಬಿಲ್- 241
ಜೂನ್ 2022 ರಲ್ಲಿ – 265 ರೂ
ಜುಲೈ 2022 ರಲ್ಲಿ- 419 ರೂಆಗಸ್ಟ್ 2022 ರಲ್ಲಿ- 348 ಬರ್ತಿದ್ದ ಕರೆಂಟ್ ಬಿಲ್ ದಿಢೀರ್ ಏರಿಕೆಗೊಂಡಿದೆ.

ಇನ್ನು, ಸೆಪ್ಟೆಂಬರ್ ತಿಂಗಳಿಗೆ 22 ಸಾವಿರ ರೂಪಾಯಿ ಕರೆಂಟ್ ಬಿಲ್ ನೀಡಿದ ಬೆಸ್ಕಾಂ ಅಧಿಕಾರಿಗಳು ಅಕ್ಟೋಬರ್ ತಿಂಗಳಿನಲ್ಲಿ ಮತ್ತೆ 500 ರೂ ಸೇರಿಸಿ 23 ಸಾವಿರ ಬಿಲ್​ ಬಂದಿದೆ. ಬಿಲ್ ನೋಡಿ ಕಂಗಾಲಾಗಿ ಬೆಸ್ಕಾಂ ಕಚೇರಿಗೆ ದೂರು ನೀಡಿದ ಕೂಲಿ ಕಾರ್ಮಿಕ ತಪ್ಪಾಗಿ ಬಿಲ್ ಕೊಟ್ಟಿರೋದಲ್ಲದೇ ಪೂರ್ತಿ ಹಣ ನೀಡುವಂತೆ ವ್ಯಕ್ತಿಗೆ ಒತ್ತಾಯ ಮಾಡಿದ್ದಾರೆ.

ನಮ್ಮದು ಶೀಟ್ ಮನೆ, ನಾವು ಇರೋದು ಬಿಟ್ಟು, ಬೇರೆ ಯಾವುದೇ ಕಮರ್ಷಿಯಲ್ ಕೆಲಸ ನಡೆಯಲ್ಲ, ಈ ಮೊದಲು 300- 400 ರೂಪಾಯಿ ಬರುತ್ತಿದ್ದ ಕರೆಂಟ್ ಬಿಲ್, ಕಳೆದ ತಿಂಗಳ ಬಿಲ್​​ನಲ್ಲಿ 22 ಸಾವಿರ ರೂಪಾಯಿ ಕಟ್ಟುವಂತೆ ಬಿಲ್ ಕೊಟ್ಟಿದ್ದಾರೆ, ನಾವು ಬಡವರು ನಾವು ಹೇಗೆ ಅಷ್ಟೊಂದು ಹಣ ನೀಡಲು ಸಾಧ್ಯ ಎಂದು ಮನೆ ಮಾಲಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Exit mobile version