Site icon PowerTV

ಸರ್ದಾರ್ ವಲ್ಲಭಬಾಯ್ ಪಟೇಲ್ ರವರ ಜನ್ಮ ದಿನ

ಇಂದು ಸರ್ದಾರ್ ವಲ್ಲಭಬಾಯ್ ಪಟೇಲ್ ರವರ ಜನ್ಮ ದಿನದ ಹಿನ್ನೆಲೆ ನಾಡಿನೆಲ್ಲೆಡೆ ಏಕತಾ ದಿವಸ್ ಆಚರಣೆ ಮಾಡಲಾಯಿತು.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ಏಕತಾ ಓಟ ಆಯೋಜನೆ ಮಾಡಿದ್ರು, ನಗರದ ನೆಹರೂ ಕ್ರೀಡಾಂಗಣದಿಂದ ಏಕತಾ ಓಟ ಆರಂಭವಾಗಿದೆ. ಎಂ.ಎಲ್.ಸಿ. ರುದ್ರೆಗೌಡ ಏಕತಾ ಓಟಕ್ಕೆ ಚಾಲನೆ ನೀಡಿದ್ರು, ಈ ಕಾರ್ಯಕ್ರಮದಲ್ಲಿ ಡಿ.ಸಿ. ಡಾ. ಸೆಲ್ವಮಣಿ, ಎಸ್.ಪಿ. ಮಿಥುನ್ ಕುಮಾರ್, ಎಂ.ಎಲ್.ಸಿ. ಅರುಣ್ ಕುಮಾರ್ ಸೇರಿದಂತೆ, ಹಲವು ಮುಖಂಡರು ಭಾಗಿಯಾಗಿದ್ರು.

ನಗರದ DAR ಪೊಲೀಸ್ ಮೈದಾನದಲ್ಲಿ ಓಟ ಮುಕ್ತಾಯವಾಗಿದೆ. ಯೂನಿಟಿ ರನ್ ನಲ್ಲಿ ಯುವಕರು, ಯುವತಿಯರು, ಪೊಲೀಸರು ಭಾಗಿಯಾಗಿದ್ರು.

Exit mobile version