Site icon PowerTV

ಓಲಾ-ಉಬರ್‌ಗೆ ಸೆಡ್ಡು ಹೊಡೆಯಲು ಸಜ್ಜಾದ ‘ನಮ್ಮ ಯಾತ್ರಿ’ ಆ್ಯಪ್‌

ಬೆಂಗಳೂರು : ಓಲಾ-ಉಬರ್‌ಗೆ ಸೆಡ್ಡು ಹೊಡೆಯಲು ಸಜ್ಜಾದ ‘ನಮ್ಮ ಯಾತ್ರಿ’ ಆ್ಯಪ್‌ ನಾಳೆಯಿಂದ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ.

ನಗರದಲ್ಲಿ ನಾಳೆಯಿಂದ ಓಲಾ, ಉಬರ್​ಗೆ ಗುಡ್ ಬೈ ಹೇಳ್ತಾರಾ ಚಾಲಕರು..? ಕನ್ನಡ ರಾಜ್ಯೋತ್ಸವ ದಿನದಂದು ಪ್ರಾಯೋಗಿಕವಾಗಿ ಚಾಲನೆಯಾಗಲಿದ್ದು, ಖಾಸಗಿ ಸಂಸ್ಥೆಯಿಂದ ತಾಂತ್ರಿಕ ಸಹಾಯ ಪಡೆದು ಆ್ಯಪ್‌ ರಚನೆಯಾಗಲಿದೆ. ಸರ್ಕಾರ ನಿಗದಿ ಮಾಡಿರುವಂತೆ ಮೊದಲು 30 ರೂ ನಂತರ ಕಿ.ಮೀಗೆ 15 ರೂ. ನಿಗದಿಯಾಗಿದ್ದು, ಮನೆವರೆಗೂ ಆಟೋ ಬಂದ್ರೆ ಪಿಕ್‌ಅಪ್‌ ಚಾರ್ಚ್‌ ಆಗಿ 10 ರೂ.ಹೆಚ್ಚುವರಿ ಶುಲ್ಕ ಪಡೆಯುತ್ತಾರೆ.

ಈಗಾಗಲೇ 10 ಸಾವಿರಕ್ಕೂ ಹೆಚ್ಚು ಜನ ಆ್ಯಪ್‌ಅನ್ನ ಡೌನ್‌ಡೌನ್‌ ಮಾಡಿದ್ದಾರೆ. ಸರ್ಕಾರದ ಡೆಡ್​ ಲೈನ್​ಗೆ ಡೋಂಟ್​ಕೇರ್ ಎಂದಿದ್ದ ಓಲಾ, ಉಬರ್..! ಬ್ರೇಕ್​ ಹಾಕಲಾಗದೇ ಸರ್ಕಾರ ಪೇಚಾಟ ಮಾಡುತ್ತಿದ್ದು, ಇದೀಗ ಆಟೋ ಚಾಲಕರ ಸಂಘದಿಂದಲೇ ಓಲಾ, ಉಬರ್​ಗೆ ಶಾಕ್ ನೀಡಿದೆ.

Exit mobile version