Site icon PowerTV

ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ : ಶಿವರಾಜ್‌ಸಿಂಗ್ ಚೌವ್ಹಾಣ್

ಕಲಬುರಗಿ : ಬಿಜೆಪಿ ಒಬಿಸಿ ವಿರಾಟ್ ಸಮಾವೇಶದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಜನ ಸೇರಿದ್ದು ಖುಷಿಯಾಗಿದೆ ಎಂದು ಸಮಾವೇಶದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್ ಚೌವ್ಹಾಣ್ ಹೇಳಿದರು.

ಕಲಬುರಗಿಯಲ್ಲಿ ಮಾತನಾಡಿದ ಅವರು, ಇಷ್ಟೊಂದು ಜನ ನೋಡ್ತಿದ್ರೆ ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಕಲಬುರಗಿ ಮೇರಿಲಿಯೇ ಬಹುತ್ ಲಕ್ಕಿ ಹೈ. ಚಿಂಚೋಳಿ ಉಪಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಬಂದಿದ್ದೆ. ಚಿಂಚೋಳಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಕಲಬುರಗಿಗೆ ಬಂದಿದ್ದಕ್ಕೆ ನಾನು ಮೂರನೇ ಬಾರಿ ಮಧ್ಯಪ್ರದೇಶದ ಸಿಎಂ ಆದೆ. ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಭಾರತ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ.

ಇಡೀ ವಿಶ್ವವೇ ಮೋದಿಯವರ ಆಡಳಿತವನ್ನ ಮೆಚ್ಚಿಕೊಂಡಿದೆ. ಭಾರತ್ ಜೋಡೊ ಯಾತ್ರ ವಿಚಾರವಾಗಿ ಮಾತನಾಡಿದ ಅವರು, 1947ರಲ್ಲಿ ಭಾರತವನ್ನ ತುಕುಡೆ ತುಕುಡೆ ಮಾಡಿದ್ದು ಇದೇ ನೆಹರು/ಕಾಂಗ್ರೆಸ್. ಇದೀಗ ತುಕುಡೆ ಮಾಡಿದವರಿಂದಲೇ ಭಾರತ್ ಜೋಡೊ ಯಾತ್ರೆ. ಬಕ್ರೀದ್​ ಬಂಚಿಂಗೆ ತೋ ಮೊಹರಂ ಮೇ ನಾಚಿಂಗೆ ಅಂತಾ ಖರ್ಗೆ ಹೇಳ್ತಾರೆ. ಈ‌ ಮೂಲಕ ಹರಕೆಯ ಕುರಿ ಅಂತಾ ಖುದ್ದು ಖರ್ಗೆ ಅವರೆ ಒಪ್ಪಿಕೊಂಡಿದ್ದಾರೆ. ಮುಳುಗುತ್ತಿರುವ ಹಡಗಿಗೆ ಖರ್ಗೆ ನಾವಿಕನಾಗಿ ಹರಕರೆಯ ಕುರಿ ಆಗಿದ್ದಾರೆ ಎಂದರು.

Exit mobile version