Site icon PowerTV

ಸರ್ದಾರ್ ವಲ್ಲಭಾಯ್ ಪಟೇಲ್ ಜನ್ಮದಿನಕ್ಕೆ ಪೊಲೀಸ್ ಇಲಾಖೆಯಿಂದ ನಮನ

ಬೆಂಗಳೂರು: ಬೆಂಗಳೂರು ನಗರದಲ್ಲಿ ಪೊಲೀಸ್ ಇಲಾಖೆಯಿಂದ ಹತ್ತು ಕಿ.ಮೀ ಏಕತಾ ಓಟ. ವಿಧಾನಸೌಧ ಮುಂಭಾಗ ಡಿಜಿಪಿ ಪ್ರವೀಣ್ ಸೂಧ್, ಕಮೀಷನರ್ ಪ್ರತಾಪ ರೆಡ್ಡಿಯಿಂದ ಚಾಲನೆ.

ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಜನ್ಮ ದಿನದ ಅಂಗವಾಗಿ ರನ್ ಫಾರ್ ಯುನಿಟಿ ಹತ್ತು ಕಿ.ಮೀ ಏಕತಾ ಓಟವನ್ನು ನಗರದ ಪೊಲೀಸ್ ಇಲಾಖೆಯಿಂದ ಹಮ್ಮಿಕ್ಕೊಳ್ಳಲಾಗಿದೆ. ನಗರದ ವಿವಿಧೆಡೆ ಹತ್ತು ಕಿಮೀ ಸಂಚರಿಸಲಿರುವ ಏಕತಾ ಓಟ. ಇನ್ನು ಕಂಠೀರವ ಸ್ಟೇಡಿಯಂನಲ್ಲಿ ಏಕತಾ ಓಟ ಮುಕ್ತಾಯವಾಗಿದೆ.

ಈ ಕುಜರಿತು ಡಿಜಿಪಿ ಪ್ರವೀಣ್ ಸೂಧ್ ಹೇಳಿಕೆ ನೀಡಿದ್ದು, ಸರದಾರ್ ವಲ್ಲಭಾಯ್ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ಏಕತಾ ದಿವಸ್ ಆಚರಣೆ. ಈ ಹಿನ್ನೆಲೆ ಬೆಂಗಳೂರು ಪೊಲೀಸರಿಂದಲೂ ಏಕತಾ ಓಟ ಆಯೋಜನೆ ಮಾಡಲಾಗಿದೆ. ಮತ್ತೆ ನಾಳೆ ಗುಜರಾತಿಯ ಕೇವಾಡಿಯ ಏಕತಾ ಪ್ರತಿಮೆ ಬಳಿ ಎಲ್ಲಾ ರಾಜ್ಯಗಳ ಪೊಲೀಸರು ಭಾಗಿ. ಮತ್ತೆ ಅಲ್ಲಿ ಪೊಲೀಸರಿಂದ ಗೌರವ ನಮನ ಕವಾಯತು ಮೂಲಕ ನಮನ ಸಲ್ಲಿಸಲಿದ್ದೇವೆ.

Exit mobile version