Site icon PowerTV

ನಟಿ ವಿನಯ ಪ್ರಸಾದ್ ಮನೆಯಲ್ಲಿ ಕಳವು

ಬೆಂಗಳೂರು: ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಕಳ್ಳತನ, ಹಿನ್ನೆಲೆಯಲ್ಲಿ ಈಗ ಕನ್ನಡದ ನಟಿ ವಿನಯ ಪ್ರಸಾದ್ ಅವರ ಮನೆಯಲ್ಲಿ ಕಳ್ಳತನವಾಗಿದೆ.

ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಟಿ ವಿನಯಪ್ರಸಾದ್ ಮನೆಯಿದ್ದು, ಇತ್ತಿಚೆಗೆ ಪತಿ ಜ್ಯೋತಿಪ್ರಕಾಶ್ ಹತ್ತಿ ಜೊತೆ ಉಡಿಪಿಗೆ ತೆರಳಿದ್ದ ನಟಿ ಮನೆಗೆ ಬಂದಾಗ ಅವರಿಗೆ ಬಿಗ್ ಶಾಕ್ ಕಾದಿತ್ತು. ಮನೆಯ ಮುಂಭಾಗಿಲಿನ ಡೋರ್ ಮೀಟಿ ಕದೀಮರು ತಮ್ಮ ಕೈಚಳಕ ತೋರಿಸಿದ್ದಾರೆ.

ಇನ್ನು ಮನೆಯಲ್ಲಿದ್ದ 7 ಸಾವಿರ ನಗದು ದೋಚಿ ಕದೀಮರು ಪರಾರಿಯಾಗಿದ್ದಾರೆ. ಊರಿನಿಂದ ಬಂದ ವಿನಯಪ್ರಸಾದ್ ದಂಪತಿಗಳು, ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಮೀಟಿರುವುದು ಬೆಳಕಿಗೆ ಬಂದಿದೆ. ತಕ್ಷಣವೆ ನಂದಿನಿಲೇಔಟ್ ಪೊಲೀಸರಿಗೆ ನಟಿ ದೂರು ದಾಖಲಿಸಿದ್ದಾರೆ.

Exit mobile version