Site icon PowerTV

‘ತಲೈವಾ ಭೇಟಿ ಮಾಡಿದ ರಿಷಬ್.. ರಜನಿ ಹೇಳಿದ್ದೇನು..?

ಕರಾವಳಿ ಕಥೆಯನ್ನು ಹೇಳೋ ಮೂಲಕ ಸಂಚಲನ  ಮೂಡಿಸಿದ ರಿಷಬ್ ಶೆಟ್ಟಿ ಎಲ್ಲರ ಹೃದಯ ಗೆದ್ದಿದ್ದಾರೆ. ಇಡೀ ಚಿತ್ರರಂಗವೇ ರಿಷಬ್​​ ಆ್ಯಕ್ಟಿಂಗ್​​ ಅಂಡ್​ ಡೈರೆಕ್ಷನ್​ಗೆ ಕ್ಲೀನ್​ ಬೋಲ್ಡ್​ ಆಗಿದ್ದು ಮೆಚ್ಚುಗೆಯ ಮಹಾಮಳೆಯನ್ನೆ ಸುರಿಸಿದೆ. ಈ ಸಾಲಿಗೆ ಸೂಪರ್​ ಸ್ಟಾರ್​ ರಜನಿಕಾಂತ್​ ಕೂಡ ಹೊರತಾಗಿಲ್ಲ. ಯೆಸ್.. ಇತ್ತೀಚೆಗೆ ತಲೈವಾ ಭೇಟಿ ಮಾಡಿರುವ ರಿಷಬ್​ಗೆ ಸೂಪರ್​ ಸ್ಟಾರ್​ ಹೇಳಿದ್ದೇನು ಗೊತ್ತಾ..?  ನೀವೇ ಓದಿ.

ಇಡೀ ಇಂಡಿಯಾ ಮಾತ್ರವಲ್ಲದೆ ವರ್ಲ್ಡ್​​​ ವೈಡ್​​​ ಕಮಾಲ್​​ ಮಾಡ್ತಿರೋ ಸಿನಿಮಾ ಕಾಂತಾರ. ರಿಷಬ್​ ಮೇಕಿಂಗ್​​ ಸ್ಟೈಲ್​ಗೆ ಚಿತ್ರರಸಿಕರೆಲ್ಲಾ ಫಿದಾ ಆಗಿದ್ದಾರೆ. ಕಾಂತಾರ ಕಂಪು ಪ್ರಪಂಚಾದಾದ್ಯಂತ ಪರಿಮಳ ಸೂಸುತ್ತಿದ್ದು , ಈ ಘಮಲಿನ ಅಮಲಿನಲ್ಲಿ ಸಿನಿರಸಿಕರು ತೇಲುತ್ತಿದ್ದಾರೆ. ಟ್ವೀಟ್​ ಮಾಡೋ ಮೂಲಕ ರಿಷಬ್​ರನ್ನು ರಜನಿಕಾಂತ್​ ಬೆನ್ನು ತಟ್ಟಿದ್ರು. ಈ ಮಧ್ಯೆ ತಲೈವಾ ಭೇಟಿ ಮಾಡಿದ್ದ ರಿಷಬ್​​ಗೆ ರಜನಿ ಸನ್ಮಾನ ಗೌರವ ಸಲ್ಲಿಸಿದ್ದಾರೆ.

ಲೆಜೆಂಡರಿ ಆ್ಯಕ್ಟರ್​​​ ರಜನಿಕಾಂತ್​​​ ಬಾಯಲ್ಲಿ ಮೆಚ್ಚುಗೆಯ ಪದಗಳನ್ನು ಕೇಳಿದ ಚಿತ್ರತಂಡ ಹ್ಯಾಪಿ ಮೂಡ್​ನಲ್ಲಿದೆ. ಸಂತಸದ ಸಕ್ಸಸ್​​​ ಲೋಕದಲ್ಲಿ ತೇಲುತ್ತಿದೆ. ಜತೆಗೆ ರಜನಿ ಬೇಟಿ ಮಾಡಿದ ಫೋಟೋಗಳನ್ನು ರಿಷಬ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ನೀವು ಒಂದು ಸಲ ಹೊಗಳಿದ್ರೆ ನೂರು ಸಲ ಹೊಗಳ್ದಂಗೆ ನಮಗೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನಿಮಗೆ ಸದಾ ಆಭಾರಿ ಎಂಬ ಪದಗಳನ್ನು ಸೇರಿಸಿದ್ದಾರೆ.

ಧೈವರಾದನೆಯ ಪ್ರಜ್ವಲತೆಯಲ್ಲಿ ರೋಮಾಂಚನಕಾರಿ ಅನುಭವ ಉಂಡಿರುವ ಪ್ರೇಕ್ಷಕರು ಚಿತ್ರಕ್ಕೆ ಸೈ ಎಂದಿದ್ರು. ಕನ್ನಡ ಮಾತ್ರವಲ್ಲದೆ ಪರಬಾಷೆಗಳಿಗೂ ದಾಪುಗಾಲಿಟ್ಟಿದ್ದ ಕಾಂತಾರ ಬಾಕ್ಸ್​ ಆಫೀಸ್​ ಕಲೆಕ್ಷನ್​​ನಲ್ಲೂ ಸದ್ದು ಮಾಡ್ತಿದೆ. ಈ ನಡುವೆ ರಜನಿ, ರಿಷಬ್​ ಸ್ಕ್ರಿಪ್ಟ್​​, ಡೈರೆಕ್ಷನ್​​​​, ಆ್ಯಕ್ಟಿಂಗ್​​​ಗೆ ಹ್ಯಾಟ್ಸ್​ಆಫ್​ ಹೇಳಿದ್ರು. ತಲೈವಾ ಮಾಡಿದ್ದ ಟ್ವೀಟ್​​ ಸಿನಿದುನಿಯಾದಲ್ಲಿ ಸಂಚಲನ ಮೂಡಿಸಿತ್ತು.

ಕೊನೆಗೂ ರಿಷಬ್​ ಸೂಪರ್ ಸ್ಟಾರ್ ಆಶೀರ್ವಾದ ಪಡೆದು ಕಂಬ್ಯಾಕ್​​ ಆಗಿದ್ದಾರೆ. ಕರುನಾಡಿನ ಹೆಮ್ಮೆಯ ಪುತ್ರನ ಬಗ್ಗೆ ಎಲ್ರೂ ಖುಷಿ ಪಡ್ತಿದ್ದಾರೆ. ಇತ್ತ ವರಾಹ ರೂಪಂ ನಕಲು ವಿವಾದ ಕೋರ್ಟ್​ ಅಂಗಳಕ್ಕೆ ಕಾಲಿಟ್ಟಿದ್ದು, ಹಾಡಿನ ಪ್ರದರ್ಶನಕ್ಕೆ ತಡೆ ಹೊಡ್ಡಿದೆ. ಕೋಝಿಕ್ಕೋಡ್​ ಸೆಷನ್ಸ್​ ಕೋರ್ಟ್ ಎಲ್ಲಾ ಮ್ಯುಸಿಕ್​ ಫ್ಲಾಟ್​​ಫಾರ್ಮ್​ಗಳಲ್ಲೂ​​ ಹಾಡನ್ನು ಪ್ಲೇ ಮಾಡಬಾರದು ಎಂದು ಸೂಚನೆ ಕೊಟ್ಟಿದೆ. ಏನೆ ಆಗಲಿ ವಿಶ್ವ ಮೆಚ್ಚಿದ ಸಿನಿಮಾ ವಿವಾದಗಳ ನಡುವೆಯೂ ಜನರಿಂದ ಶಹಬ್ಬಾಸ್​ಗಿರಿ ಪಡೆದು ಮುನ್ನುಗ್ತಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೊ, ಪವರ್ ಟಿವಿ​​​​​

Exit mobile version