Site icon PowerTV

ರಾಜಧಾನಿಯ ಪ್ರಮುಖ ರಸ್ತೆಗೆ ದಿಗ್ಗಜರ ಹೆಸರಿಡಲು ಪಾಲಿಕೆಯಿಂದ ಚಿಂತನೆ

ಬೆಂಗಳೂರು : ರಾಜಧಾನಿಯ ಎರಡು ಪ್ರಮುಖ ರಸ್ತೆಗೆ ಇಬ್ಬರು ದಿಗ್ಗಜರ ಹೆಸರಿಡಲು ಪಾಲಿಕೆಯಿಂದ ಚಿಂತನೆ ಮಾಡಿದೆ.

ನಗರದ ಎರಡು ಪ್ರಮುಖ ರಸ್ತೆಗಳಿಗೆ ಇಬ್ಬರು ದಿಗ್ಗಜರ ಹೆಸರು ಇಡಲು ಬೇಡಿಕೆ ಹೆಚ್ಚಿದೆ. ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ ಹೆಸರು ಇಡುವ ಬೇಡಿಕೆ ಇಟ್ಟಿದ್ದಾರೆ. ಶಾಂತಿನಗರ ಬಸ್ ಟರ್ಮಿನಲ್ ಮುಂಭಾಗದ ರಸ್ತೆಗೆ ಅಪ್ಪು ಹೆಸರಿಡುವಂತೆ ಬಿಬಿಎಂಪಿಗೆ ಮನವಿಗೆ ಮನವಿ ಮಾಡಿದೆ.

ವಿಲ್ಸನ್ ಗಾರ್ಡನ್ 8th ಕ್ರಾಸ್ ರಸ್ತೆಗೆ ವಿರಾಟ್ ಕೊಹ್ಲಿ ಹೆಸರಿಡುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಬಿಬಿಎಂಪಿ ಆಡಳಿತಗಾರರಿಗೆ ಹಾಗೂ ಬಿಬಿಎಂಪಿ ಚೀಫ್ ಕಮಿಷನರ್‌ಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಜೊತೆ ಚರ್ಚೆ ಮಾಡಲು ಬಿಬಿಎಂಪಿ ಮುಂದಾಗಿದೆ. ವಿಲ್ಸನ್ ಗಾರ್ನ್ 8ನೇ ಕ್ರಾಸ್ ಹಾಗೂ ಬಸ್ ನಿಲ್ದಾಣದ ಮುಂಭಾಗದ ರಸ್ತೆಗೆ ಈವರೆಗೆ ಯಾವುದೇ ಅಧಿಕೃತ ಹೆಸರುಗಳಿಲ್ಲ. ಹೀಗಾಗಿ ಈ ಎರಡೂ ರಸ್ತೆಗಳಿಗೆ ಈ ಎರಡು ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿದ್ದಾರೆ

Exit mobile version