Site icon PowerTV

ನಾಯಿಗು ಹಾಫ್ ಟಿಕೆಟ್ ಪಡೆಯಲು ಮುಂದಾದ ಕೆಎಸ್​ಆರ್​ಟಿಸಿ..!

ಬೆಂಗಳೂರು:ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಲಗೇಜ್ ಸಾಗಣೆ ನಿಯಮಾವಳಿಗಳಲ್ಲಿ ಬದಲಾವಣೆ. ಇನ್ಮುಂದೆ ಕೆಎಸ್ಆರ್​ಟಿಸಿ ಬಸ್ ನಲ್ಲಿ ನಾಯಿಗೆ ಹಾಫ್ ಟಿಕೆಟ್ ಪಡೆಯಬೇಕಾಗಿದೆ.

ಪ್ರಯಾಣಿಕರ ಒತ್ತಡಕ್ಕೆ ಮಣಿದ ಕೆಎಸ್ಆರ್​ಟಿಸಿ. ಇಷ್ಟು ದಿನ ಬಸ್ ನಲ್ಲಿ ನಾಯಿಯನ್ನು ಕೊಂಡೊಯ್ಯಲು ಒಬ್ಬ ವಯಸ್ಕ ಪ್ರಯಾಣಿಕರಂತೆ ಪರಿಗಣಿಸುತ್ತಿದ್ದ ನಿಗಮ. ಇದೀಗ ನಿಯಮದಲ್ಲಿ ಮಾರ್ಪಾಡು ಮಾಡಿ ನಾಯಿ ಹಾಗೂ ನಾಯಿ ಮರಿಗೆ ಅರ್ಧ ಟಿಕೆಟ್ ನಿಯಮ ಜಾರಿಮಾಡಿದೆ.

ಸಾಮಾನ್ಯ ವೇಗದೂತ ನಗರ ಹೊರವಲಯ ಬಸ್ ಗಳಲ್ಲಿ ನಾಯಿ ಸಾಗಾಣಿಕೆಗೆ ಅವಕಾಶ, ಬಸ್ ನಲ್ಲಿ ಯದ್ವಾತದ್ವಾ ಲಗೇಜ್ ಸಾಗಾಣಿಕೆಗೆ ನಿಗಮ ಬ್ರೇಕ್ ಆಕಿದೆ. ಪ್ರತಿ ಪ್ರಯಾಣಿಕರ 30 ಕೆಜಿ ಲಗೇಜ್ ಕೊಂಡೊಯ್ಯಲು ಮಾತ್ರ ಅವಕಾಶ ನಿಗಮ ಅವಕಾಶ ನೀಡಿದೆ. 30 ಕೆಜಿ ಕ್ಕಿಂತ ಹೆಚ್ಚು ಸಾಗಾಣಿಕೆಗೆ ನಿಯಮದಂತೆ ಹೆಚ್ಚುವರಿ ದರ ವಿಧಿಸಲು ಕೆಎಸ್ಆರ್​ಟಿಸಿ ಹೊಸ ಸುತೋಲೆಯನ್ನು ಹೊರಡಿಸಿದೆ.

Exit mobile version