Site icon PowerTV

ಕಲಬುರಗಿ: ಬಿಜೆಪಿ ಒಬಿಸಿಯ ವಿರಾಟ್ ಸಮಾವೇಶ

ಕಲಬುರಗಿ: ಕಲಬುರಗಿಯಲ್ಲಿ ಒಬಿಸಿಗೆ ಸಂಬಂದಿಸಿದಂತೆ ಬೃಹತ್ ಸಮಾವೇಶವನ್ನು ಬಿಜೆಪಿ ಪಾಳಯದವರು ನಡೆಸುತ್ತಿದ್ದಾರೆ. ಇನ್ನು ಸಮಾವೇಶದಲ್ಲಿ ಕಮಲ ಪಾಳಯದ ಗಟಾನುಗಟಿಗಳು ಹಾಜರಾಗಿದ್ದಾರೆ.

ಸಮಾವೇಶದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಕೌತುಕತೆ ಸೃಷ್ಟಿಸಿದೆ. ಮೈಸೂರು ಭಾಗದಿಂದ ರಥಯಾತ್ರೆ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ರಥಯಾತ್ರೆ ಮಾಡಲಾಗುತ್ತದೆ.

ಎಲ್ಲರೂ ಒಟ್ಟಗೆ ಸೇರಿ ಏಳೆಂಟು ಲಕ್ಷ ಜನ ಒಟ್ಟುಗೂಡಿ ದಾವಣಗೆರೆಯಲ್ಲಿ ಸಮಾವೇಶ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ಬರುವುದನ್ನ ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪಕ್ಷದ ಕಾರ್ಯಕರ್ತರು ತಳಮಟ್ಟದಿಂದ ಕೆಲಸ ಮಾಡಿದ್ರೆ ಅಧಿಕಾರಕ್ಕೆ ಬರುತ್ತೇವೆ. ಹಣಬಲ/ತೋಳುಬಲ/ಜಾತಿ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕನಸು ಕಾಣುತ್ತಿದೆ. ನವೆಂಬರ್ 11 ರಂದು ಬೆಂಗಳೂರಿನಲ್ಲಿ ಕೆಂಪೇಗೌಡ ಮೂರ್ತಿ ಉದ್ಘಾಟನೆಯ, ಬೃಹತ್ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

Exit mobile version