Site icon PowerTV

ಮಲೆನಾಡು ಹೋರಿ ಬೆದರಿಸುವ ಹಬ್ಬಕ್ಕೆ ಇಬ್ಬರ ಬಲಿ

ಶಿವಮೊಗ್ಗ: ಮಲೆನಾಡಲ್ಲಿ ಹೋರಿ ಬೆದರಿಸುವ ಹಬ್ಬ ಶುರುವಾಗಿದೆ. ಇನ್ನು ಹಬ್ಬದ ಪ್ರಾರಂಭದಲ್ಲಿಯೇ ಇಬ್ಬರು ಬಲಿಯಾಗಿದ್ದಾರೆ.
ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರ ಸಾವು.

ಶಿಕಾರಿಪುರದ ಗಾಮಾ ಗ್ರಾಮ ಹಾಗೂ ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಗೆ ಇಬ್ಬರು ಬಲಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ  ಶಿಕಾರಿಪುರ ತಾಲ್ಲೂಕಿ ಗಾಮಾ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಪ್ರಶಾಂತ್ (36) ಎಂಬಾತ ಸಾವು.
ಘಟನೆ ವಿಡಿಯೋ ಇದೀಗ ಎಲ್ಲೆಡೆ  ವೈರಲ್​ ಆಗಿದೆ.

ಹೋರಿ ಬೆದರಿಸುವ ಸಂದರ್ಭದಲ್ಲಿ, ಬೆದರದ ಹೋರಿಯು ಒಂದು ಕಡೆಯ ಗೋಡೆ ಕಡೆಗೆ ತಿರುಗಿ ಹಿಂದಕ್ಕೆ ವಾಪಸ್​ ನುಗ್ಗುತ್ತದೆ.
ಈ ವೇಳೆ ಪ್ರಶಾಂತ್​ನ ಮೈಮೇಲೆ  ಹಾರಿ ಎದೆ ಮೇಲೆ ಕಾಲಿಟ್ಟು ಮುಂದಕ್ಕೆ ಹೋದ ಹೋರಿ. ಈ ಸಂದರ್ಭದಲ್ಲಿ ಪ್ರಶಾಂತ್ ಗಂಭೀರ ಗಾಯ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಕಿತ್ಸೆ ನೀಡಲಾಗಿತ್ತು. ಆದರೆ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾದೇ ಪ್ರಶಾಂತ್ ಸಾವಿಗೀಡಾಗಿದ್ದಾರೆ. ಇದೇ ರೀತಿ ಸೊರಬ ತಾಲ್ಲೂಕು ಜಡೆ ಗ್ರಾಮದಲ್ಲೂ ಕೂಡ ಚಗಟೂರು ನಿವಾಸಿ ಆದಿ (20) ಎ ಓರ್ವ ಹೋರಿಹಬ್ಬಕ್ಕೆ ಬಲಿಯಾಗಿದ್ದಾನೆ.

Exit mobile version