Site icon PowerTV

5.28 ಕೋಟಿ ಗಳಿಸಿದ ‘ಗಂಧದ ಗುಡಿ’

ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ, ಅಮೋಘವರ್ಷ ನಿರ್ದೇಶನದ ‘ಗಂಧದ ಗುಡಿ’ ಚಿತ್ರದ ಮೊದಲ ದಿನವೇ 5.28 ಕೋಟಿ ರೂಮಾಯಿ ಗಳಿಸಿದೆ. ಮುಂಗಡ ಬುಕಿಂಗ್‌ನಿಂದಲೇ 1.72 ಕೋಟಿ ಹಾಗೂ ಗುರುವಾರ ಸಂಜೆ ಆಯೋಜಿಸಿದ್ದ ಪೇಯ್ಡ್‌ ಪ್ರೀಮಿಯರ್‌ ಶೋಗಳಿಂದ 28 ಲಕ್ಷ ರೂಪಾಯಿ ಕಲೆಕ್ಷನ್‌ ಆಗಿದೆ.

ಒಟ್ಟಾರೆ ಮೊದಲ ದಿನ ಅಪ್ಪು ನಟನೆಯ ಕೊನೆಯ ಚಿತ್ರ ಗಳಿಸಿದ್ದು 5.28 ಕೋಟಿ ರೂ. ಎನ್ನಲಾಗುತ್ತಿದೆ. ರಾಜ್ಯಾದ್ಯಂತ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಗಳು ಬರುತ್ತಿದ್ದು, ಈಗಾಗಲೇ ಶೇ.62.77ರಷ್ಟು ಟಿಕೆಟ್‌ಗಳು ಮಾರಾಟ ಆಗಿವೆ.

ಸಿನಿಮಾ ಗಳಿಕೆಯ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತವಾಗಿ ಹೇಳಬೇಕಿದೆ. ಆದರೆ, ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಗಂಧದ ಗುಡಿ’ ತೆರೆಕಂಡಿದೆ. ಮೊದಲ ದಿನವೇ 1800ಕ್ಕೂ ಹೆಚ್ಚು ಶೋಗಳನ್ನು ಕಂಡಿದ್ದು, ಪ್ರತಿ ಚಿತ್ರಮಂದಿರಗಳಲ್ಲೂ ಒಂದೇ ದಿನ 6 ರಿಂದ 7 ಪ್ರದರ್ಶನಗಳನ್ನು ಕಂಡಿದೆ.

Exit mobile version