Site icon PowerTV

ಕಬ್ಬು ಬೆಲೆ ನಿಗದಿಗೆ ಸರ್ಕಾರ ಮೀನಾಮೇಷ..!

ಕಾರವಾರ: ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಕಬ್ಬು ಬೆಳೆ ನಿಗದಿಗೆ ಆಗ್ರಯಿಸಿ ರೈತರು ತೀವ್ರ ಪ್ರತಿಭಟನೆ ಮಾಡುತ್ತಿದ್ದಾರೆ. ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ.ಧಾರವಾಡದ ಶ್ರೀ ಕ್ಷೇತ್ರ ದ್ವಾರಕಾಪುರದ ಶ್ರೀ ಡಾ. ಪರಮಾತ್ಜೀ ಸ್ವಾಮೀಜಿ ಅವರಿಂದ ಆಮರಾಣಾಂತ ಉಪವಾಸ ಸತ್ಯಾಗ್ರಹ. ಕಬ್ಬು ಬೆಲೆ ನಿಗದಿಗೆ ಸರ್ಕಾರ ಮೀನಾಮೇಷ ಎಣಿಸುತ್ತಿದ್ದು, ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಕಬ್ಬು ಬೆಳೆಗಾರರು.

ನಾಳೆ ಜಿಲ್ಲಾಧಿಕಾರಿಗಳು ಹಾಗೂ ತಹಶಿಲ್ದಾರರ್ ಕಚೇರಿಗಳಿಗೆ ರೈತರು ಮುತ್ತಿಗೆ ಹಾಕಲಿದ್ದಾರೆ. ನಾಳೆಯೂ ಸಹ ಸರ್ಕಾರ ಕ್ರಮ ತೆಗೆದುಕೊಳ್ಳದೇ ಇದ್ದರೆ, ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಕಚೇರಿಗಳಲ್ಲಿ ಅಹೋರಾತ್ರಿ ಧರಣಿಗೆ ರೈತ ಮುಖಂಡರು ತೀರ್ಮಾನ ಮಾಡಿದ್ದಾರೆ.

Exit mobile version