Site icon PowerTV

ಗುಮ್ಮಟನಗರಿಯಲ್ಲಿ ಕತ್ತೆ ಹಾಲಿಗೆ ಡಿಮ್ಯಾಂಡ್

ವಿಜಯಪುರ : ಕಾಲ ಬದಲಾಗುತ್ತಿದ್ದಂತೆ, ಆಹಾರ ಶೈಲಿಯೂ ಬದಲಾಗುತ್ತಾ ಹೋಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಾವು ತೆಗೆದುಕೊಳ್ಳುವ ಹಾಲು ಸಹ ಪೌಷ್ಟಿಕಾಂಶಯುಕ್ತವಾಗಿಲ್ಲ. ಆದರೆ, ಕತ್ತೆ ಹಾಲಲ್ಲಿ ಪೌಷ್ಟಿಕಾಂಶವಿದೆ. ಹಾಗಾಗಿ ವಿಜಯಪುರದಲ್ಲಿ ಕತ್ತೆಹಾಲಿಗೆ ಬೇಡಿಕೆ ಹೆಚ್ಚಾಗಿದೆ. ನಗರದ ಹಲವು ಕಡೆಗಳಲ್ಲಿ ಕತ್ತೆಗಳನ್ನು ಕರೆತರುವ ಮಾಲೀಕರು, 100 ರೂಪಾಯಿಗೆ 25 ಎಂಎಲ್‌ನಂತೆ ಹಾಲು ಮಾರುತ್ತಿದ್ದಾರೆ. ಕತ್ತೆ ಹಾಲನ್ನು ಕುಡಿದರೆ ಮಕ್ಕಳಿಗೆ ಕೆಮ್ಮು, ನೆಗಡಿ, ಶೀತ, ಜ್ವರ, ಆಯಾಸ, ವಾಯು, ವಾತ ಮುಂತಾದವುಗಳೆಲ್ಲಾ ಬರಲ್ಲವಂತೆ.

ಇನ್ನು ಕತ್ತೆ ಹಾಲು ಕುಡಿಸುವುದರಿಂದ ಯಾವುದೇ ಸೈಡ್ ಎಫೆಕ್ಟ್ ಆಗೋದಿಲ್ಲ.ಕೊರೋನಾ ಸಮಯದಲ್ಲೂ ರೋಗನಿರೋಧಕ ಶಕ್ತಿ ಬೇಕಾಗಿತ್ತು. ಹೀಗಾಗಿ ಮಕ್ಕಳಿಗೆ ಕತ್ತೆ ಹಾಲು ಕುಡಿಸಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಮೂಲಕ ಮಕ್ಕಳು ದೈಹಿಕವಾಗಿ ಸದೃಢರಾಗುತ್ತಾರಂತೆ.

ನಾವು ಕತ್ತೆ ಹಾಲು ಕುಡಿಯಬೇಕೆಂದು ಅಸಹ್ಯ ಪಡುತ್ತಿದ್ದವರು, ಇದೀಗ ಕತ್ತೆ ಹಾಲಿನ ಮಹತ್ವವನ್ನು ತಿಳಿದುಕೊಂಡು ಅದನ್ನು ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ.ಒಟ್ಟಾರೆ ಕತ್ತೆಗೂ ಒಂದು ಕಾಲ ಬರುತ್ತದೆಂಬ ಗಾಧೆ ನಿಜವಾಗುತ್ತಿದೆ.

ಸುನೀಲ್ ಭಾಸ್ಕರ ಪವರ ಟಿವಿ ವಿಜಯಪುರ

Exit mobile version