Site icon PowerTV

ಕಾಂಗ್ರೆಸ್ ಪ್ರತಿಭಟನೆ: ಸಿಎಂ ಹಾಗೂ ಗೃಹ ಸಚಿವರ ಪೋಸ್ಟರ್​ಗೆ ಅವಮಾನ

ಬೆಂಗಳೂರು: ರಾಜ್ಯಾದ್ಯಂತ 2023ರ ಚುನಾವಣೆಗೆ ಪ್ರತಿಪಕ್ಷಗಳಲ್ಲಿ ತೀವ್ರ ಹಣಾಹಣಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಒಬ್ಬ ಮೇಲೊಬ್ಬರು ಆರೋಪಗಳನ್ನು ಮಾಡುತ್ತಿದ್ದಾರೆ.

ಕೆ.ಆರ್ ಪುರಂ ಇನ್ಸ್​ಪೆಕ್ಟರ್ ನಂದೀಶ್ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ, ಸಚಿವ ಎಂಟಿಬಿ‌ ನಾಗರಾಜ್ ಹೇಳಿಕೆ ಖಂಡಿಸಿ ಈಗಾಗಲೇ ಬಿಜೆಪಿ ಪಕ್ಷದ ನಾಯಕರೆ ತೀವ್ರ ವಿರೋದ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಎಂಟಿಬಿ ರಾಜೀನಾಮೆಗೆ ಆಗ್ರಹಿಸಿ ಕೈ ಪ್ರೊಟೆಸ್ಟ್ ಮಾಡುತ್ತಿದ್ದಾರೆ. 70-80 ಲಕ್ಷ ಕೊಟ್ಟು ಪೋಸ್ಟಿಂಗ್ ತಗೆದುಕೊಂಡಿರ್ತಾರೆ ಎಂದಿದ್ದ ಎಂಟಿಬಿ ನಾಗರಾಜ್ ರವರ ಹೇಳಿಕೆ ಈಗಾಗಲೇ ಕಮಲ ಪಾಳಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ನ್ಯಾಯಾಂಗ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹ ಮಾಡುತ್ತಿದ್ದು, ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಬಳಿಯ ಪ್ರತಿಬಟನೆಯಲ್ಲಿ, ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಪೋಸ್ಟರ್ ಗೆ ಪ್ರತಿಬಟನಕಾರರು ಚಪ್ಪಲಿಯಿಂದ ಹೊಡೆದು ಪ್ರತಿಬಟನೆ ಮಾಡುತ್ತಿದ್ದಾರೆ.

 

Exit mobile version