Site icon PowerTV

ಭಗತ್ ಸಿಂಗ್ ಪಾತ್ರದ ಪ್ರಾಕ್ಟೀಸ್ ವೇಳೆ ಬಾಲಕ ಸಾವು

ಚಿತ್ರದುರ್ಗ : ಭಗತ್ ಸಿಂಗ್ ಪಾತ್ರದ ಪ್ರಾಕ್ಟೀಸ್ ವೇಳೆ ಬಾಲಕ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಬಾಲಕ ಸಂಜಯ್ ಗೌಡ(12) ದುರ್ಮರಣವಾಗಿದ್ದು, ನಗರದ ಕೆಳಗೋಟೆ ಬಡಾವಣೆಯ ಮನೆಯಲ್ಲಿ ಬಾಲಕ ಸಾವನ್ನಪ್ಪಿದ್ದಾನೆ. ಸಂಜಯ್, ಎಸ್ ಎಲ್ ವಿ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ನವೆಂಬರ್ 1ಕ್ಕೆ ಭಗತ್ ಸಿಂಗ್ ಪಾತ್ರ ನಿರ್ವಹಿಸಲು ಸಿದ್ಧತೆ ನಡೆಸುತ್ತಿದ್ದ.

ಇನ್ನು, ಮನೆಗೆ ಬಂದ ಬಳಿಕವೂ ನಿನ್ನೆ ರಿಹರ್ಸಲ್​​ಗೆ ಮುಂದಾಗಿದ್ದ ಬಾಲಕ, ಮನೆಯಲ್ಲಿ ಯಾರೂ ಇಲ್ಲದ ವೇಳೆ ರಿಹರ್ಸಲ್ ಮಾಡುತ್ತಿದ್ದು, ಫ್ಯಾನಿಗೆ ನೂಲಿನ ಹಗ್ಗ ಬಿಗಿದು ಮಂಚದ ಮೇಲೆ ನಿಂತಿದ್ದಾನೆ. ಬಳಿಕ ತನ್ನ ಮುಖಕ್ಕೆ ಉಲ್ಲನ್ ಟೋಪಿ ಹಾಕಿಕೊಂಡು ಜಿಗಿದಿದ್ದಾನೆ. ಹೀಗಾಗಿ, ಬಾಲಕ ಸಂಜಯ್ ಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪೋಷಕರು ಮನೆಗೆ ಬಂದು ನೋಡಿದಾಗ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾನೆ.

Exit mobile version