Site icon PowerTV

ಕನ್ನಡ ಬಾವುಟಗಳಲ್ಲಿ ರಾರಾಜಿಸಿದ ಅಪ್ಪು

ಬೆಂಗಳೂರು : ಮಂಗಳವಾರ ರಾಜ್ಯೋತ್ಸವದ ಸಂಭ್ರಮವಿದೆ. ಕಳೆದ ವರ್ಷ ಅಪ್ಪು ಅಗಲಿಕೆಯಿಂದಾಗಿ ತೀರಾ ಸರಳವಾಗಿ ರಾಜ್ಯೋತ್ಸವ ಆಚರಣೆ ಆಗಿತ್ತು. ಆದ್ರೆ, ಈ ಬಾರಿ ರಾಜ್ಯೋತ್ಸವವನ್ನು ಅಪ್ಪು ಇರುವ ಬಾವುಟಗಳ ಮೂಲಕ ಆಚರಣೆ ಮಾಡಲು ನಿರ್ಧರಿಸಲಾಗಿದೆ. ರಾಜಧಾನಿಯ ಯಶವಂತಪುರ, ಮಾಗಡಿ ರಸ್ತೆ,ಬಿನ್ನಿ ಮಿಲ್ ರಸ್ತೆ, ಸಿಗ್ನಲ್‌ಗಳು ಸೇರಿದಂತೆ ಹಲವೆಡೆ ಈ ಕನ್ನಡ ಧ್ವಜಗಳ ಮಾರಾಟ ಈಗಲೇ ಶುರುವಾಗಿದೆ.

ಇನ್ನು ಈ ಬಾರಿ ಉತ್ಪಾದನೆ ಕಮ್ಮಿ ಆಗಿರೋದ್ರಿಂದ ಕನ್ನಡ ಧ್ವಜಗಳು ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬಂದಿವೆ. ಹೀಗಾಗಿ ಬೆಲೆ ಕೂಡ ಕೊಂಚ ಜಾಸ್ತಿಯಾಗಿದೆ. ಆದರೂ ಕೂಡ ಜನ ರಾಜ್ಯೋತ್ಸವ ಆಚರಿಸಬೇಕು ಅಂತ ಬಾವುಟವನ್ನು ಖರೀದಿ ಮಾಡುತ್ತಿದ್ದಾರೆ. ಇದರ ಜೊತೆಗೆ ಬಂಟಿಂಗ್ಸ್ , ಬ್ಯಾಡ್ಜ್, ಟಿ ಶರ್ಟ್ ಹೀಗೆ ಹಲವು ವಸ್ತುಗಳು ಕನ್ನಡ ಧ್ವಜದಲ್ಲಿ ನಿರ್ಮಾಣಗೊಂಡಿದೆ.

ಒಟ್ಟಾರೆಯಾಗಿ ನವೆಂಬರ್‌ಗೂ ಮುನ್ನವೇ ಎಲ್ಲೆಲ್ಲೂ ಕನ್ನಡದ ಕಂಪು ಸೂಸುತ್ತಿತ್ತು. ಕನ್ನಡ ಉಳಿಸಿ ಬೆಳಸಬೇಕು ಅಂತ ಅದ್ದೂರಿಯಾಗಿ ರಾಜ್ಯೋತ್ಸವವನ್ನು ಅರ್ಥಫೂರ್ಣವಾಗಿ ಆಚರಿಸಲು ಸಿದ್ಧತೆ ಭರದಿಂದ ಸಾಗಿದೆ.

ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು

Exit mobile version