Site icon PowerTV

ಬೆಂಗಳೂರು: ಪೊಲೀಸರಿಂದ ಬೃಹತ್ ಪ್ರಮಾಣದ ಎಂಡಿಎಂಎ ಜಪ್ತಿ

ಬೆಂಗಳೂರು: ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರಿಂದ ಬೃಹತ್ ಪ್ರಮಾಣದ ಎಂಡಿಎಂಎ ಜಪ್ತಿ ಮಾಡಿದ್ದಾರೆ. ಇನ್ನು ಅಶೋಕನಗರ, ಕಬ್ಬನ್ ಪಾರ್ಕ್ ಠಾಣಾ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ವಿದೇಶಿ ಪ್ರಜೆಗಳಿಂದ ಬರೋಬ್ಬರಿ ಮಾದಕ ಸಹಿತ 1 ಕೋಟಿ 9 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಡಾನ್,ಯೆಮನ್,ನೈಜೀರಿಯಾ,ಚಾಡ್, ಕೇರಳಾ ಮೂಲದ 11 ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ. ಮೊಹಮ್ಮದ್ ಹರೂನ್, ಮೊಹಮ್ಮದ್ ಒರುವಿಲ್, ಮೊಹಮ್ಮದ್ ಇಲಿಯಾಸ್, ಅಬ್ಧುರ್ ಅಬು, ಅಹಮದ್ ಮೊಹಮ್ಮದ್ ‌ಮೂಸಾ, ಮಾನ್ಶನ್ಶೀದ್, ಮೊಹಮ್ಮದ್ ಬಿಲಾಲ್, ಜಾನ್ ಪೌಲ್, ಜೋಸೆಫ್ ಬೆಂಜಮಿನ್ ಹಾಗೂ ಇಸ್ಮಾಯಿಲ್ ಬಂಧಿತರು.

ವಿವಿಧ ಕಾರಣಗಳಿಗಾಗಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆರೋಪಿಗಳು, ವೀಸಾ ಅವಧಿ ಮುಗಿದ ಬಳಿಕವೂ ನಕಲಿ ದಾಖಲಾತಿಗಳನ್ನ ಬಳಸಿ ವಾಸವಿದ್ದರು. ಬಂಧಿತರಿಂದ ಗಾಂಜಾ, ಎಂಡಿಎಂಎ, 2 ಕಾರುಗಳು,ಮೊಬೈಲ್ ಫೋನ್ಸ್, ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Exit mobile version