Site icon PowerTV

ವಿಜಯಪುರದಲ್ಲಿ ಸತತ ಎರಡು ಬಾರಿ ಭೂಕಂಪನ

ವಿಜಯಪುರ : ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ ದಾಖಲಾಗಿದ್ದು, ನಿನ್ನೆ ರಾತ್ರಿ 9.47 ಕ್ಕೆ ಹಾಗೂ ಈಗ ನಸುಕಿನ ಜಾವ 4.40 ರ ಸುಮಾರಿಗೆ ಭೂಕಂಪನ ಸಂಭವಿಸಿದೆ.

ನಸುಕಿನ ಜಾವ ಭಾರೀ ಸದ್ದಿನೊಂದಿಗೆ ನಡುಗಿದ ಭೂಮಿ. 5 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಕಂಪಿಸಿದೆ. ರಾತ್ರಿ 9.47ಕ್ಕೆ 2.8 ತೀವ್ರತೆಯಲ್ಲಿ ಭೂಕಂಪಿಸಿದ್ದು, ಮತ್ತೆ ನಸುಕಿನ ಜಾವ 4.40ಕ್ಕೆ 2.8 ತೀವ್ರತೆಯಲ್ಲಿ ಭೂಕಂಪಿಸಿದೆ.

ಎರಡನೇ ಭೂಕಂಪನದ ಕೇಂದ್ರಬಿಂದು ವಿಜಯಪುರ ತಾ. ಹಂಚಿನಾಳ ಗ್ರಾಮದ ಎರಡು ಕಡೆಗಳಲ್ಲು 2.8 ತೀವ್ರತೆಯಲ್ಲಿ ಭೂಕಂಪಿಸಿದೆ. ಭೂಕಂಪನ ದೃಢಪಡಿಸಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ. ಮೇಲಿಂದ ಮೇಲೆ ಸಂಭವಿಸುತ್ತಿರುವ ಭೂಕಂಪನಗಳಿಂದ ಜನ ಬೆಚ್ಚಿಬಿದ್ದಿದ್ದಾರೆ.

Exit mobile version