Site icon PowerTV

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ ಸೆರೆ

ತುಮಕೂರು: ಹಲವು ದಿನಗಳಿಂದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬೋರಸಂದ್ರ ಗ್ರಾಮದಲ್ಲಿ, ಹಲವು ದಿನಗಳಿಂದ ನಿದ್ದೆಗೆಡಿಸಿದ್ದ ಕರಡಿ ಸೆರೆಸಿಕ್ಕಿದೆ.

ಸಾಕಷ್ಟು ದಿನಗಳಿಂದ ಬೋರಸಂದ್ರ ಗ್ರಾಮದಲ್ಲಿ, ಜನರ ಕಣ್​ತಪ್ಪಿಸಿ ಒಡಾಡುತ್ತಿದ್ದ ಕರಡಿಯೊಂದು ಗ್ರಾಮದ ಜನತೆಗೆ ಸಾಕಷ್ಟು ತೊಂದರೆಗಳನ್ನು ಕೊಡುತಿತ್ತು. ಈ ಕರಡಿಯಿಂದಾಗಿ ಕೆಲ‌ ದಿನಗಳಿಂದ ಕರಡಿ ಉಪಟಳಕ್ಕೆ ಆತಂಕಗೊಂಡಿದ್ದ ಗ್ರಾಮಸ್ಥರು.

ಇನ್ನು ಗ್ರಾಮಸ್ಥರ ಒತ್ತಾಯದ ಮೇರೆಗೆ ಕರಡಿ ಸೆರೆಗೆ ಬೋನ್ ಇಟ್ಟಿದ್ದ ಅರಣ್ಯ ಇಲಾಖೆ ಸಿಬ್ಬಂದಿ. ಇಂದು ಬೆಳ್ಳಂಬೆಳಗ್ಗೆ ಬೋನ್ ಗೆ ಬಿದ್ದ ಕರಡಿ.ಸೆರೆ ಸಿಕ್ಕ ಕರಡಿಯನ್ನ ರಕ್ಷಣೆ ಮಾಡಿ, ಕೊಂಡ್ಯೊಯ್ದ ಅರಣ್ಯ ಇಲಾಖೆಯ ಸಿಬ್ಬಂದಿ. ಕರಡಿ ಸೆರೆಯಿಂದ ನಿಟ್ಟುಸಿರು ಬಿಟ್ಟ ಬೋರಸಂದ್ರ ಗ್ರಾಮಸ್ಥರು.

 

Exit mobile version