Site icon PowerTV

ಕೆಆರ್​ಎಸ್​ ಬೃಂದಾವನಕ್ಕೆ ಪ್ರವಾಸಿಗರಿಗೆ ಮತ್ತೆ ನಿಷೇಧ.!

ಮಂಡ್ಯ; ವಿಶ್ವ ಪ್ರಸಿದ್ದ ಕೆಆರ್​ಎಸ್​ ಬೃಂದಾವನಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ರಜಾ ದಿನಗಳಲ್ಲಂತೂ ಕಾಲಿಡಲು ಜಾಗವಿರಲ್ಲ. ಇಲ್ಲಿನ ವಿದ್ಯುತ್ ದೀಪಲಂಕಾರ, ಮ್ಯೂಸಿಕ್, ಕಾರಂಜಿಯ ನರ್ತನ ನೋಡುಗರ ಮನಸೂರೆಗೊಳ್ಳುತ್ತದೆ. ಇಂತಹ ಅದ್ಭುತವಾದ ತಾಣ ಈಗ ಬಿಕೋ ಎನ್ನತ್ತಿದೆ. ಕಾರಣ ಇಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡು ಎಲ್ಲರಲ್ಲೂ ಆತಂಕ ಮೂಡಿಸಿದೆ.

ಹೌದು.. ಕಳೆದ ಒಂದು ವಾರದ ಹಿಂದೆಯೂ ಚಿರತೆ ಪ್ರತ್ಯಕ್ಷಗೊಂಡು ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ತಕ್ಷಣ ಪ್ರವೇಶ ನಿಷೇಧಿಸಿದ್ದಲ್ಲದೆ, ಎರಡು ಕಡೆ ಬೋನಿಡಲಾಗಿತ್ತು. ನಂತರ ಚಿರತೆ ಓಡಿ ಹೋಗಿರಬಹುದೆಂದು ಮತ್ತೆ ಪ್ರವೇಶ ನೀಡಲಾಗಿತ್ತು. ಆದ್ರೆ ಈಗ ಮತ್ತೆ ಚಿರತೆ ಪ್ರತ್ಯಕ್ಷ ಆಗಿರೋದ್ರಿಂದ ಮತ್ತೆ ಪ್ರವೇಶ ನಿಷೇಧಿಸಲಾಗಿದೆ.

ಸದ್ಯ ಎರಡು ಬೋನುಗಳನ್ನಿಟ್ಟು ಮತ್ತೆ ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ. ಈಗ ರಜಾ ಮತ್ತೆ ಬಂದಿದೆ. ಬೃಂದಾವನ ನೋಡಲು ಆಗಮಿಸುತ್ತಿರುವ ಪ್ರವಾಸಿಗರು ನಿರಾಸೆಯಿಂದ ವಾಪಸ್ಸಾಗುತ್ತಿದ್ದಾರೆ.

Exit mobile version