Site icon PowerTV

ಕನಕ ಮೂರ್ತಿ ಉದ್ಘಾಟನೆ ವೇಳೆ ಬುಗಿಲೆದ್ದ ವಾಗ್ವಾದ

ರಾಯಚೂರು:ಕನಕ ಮೂರ್ತಿ ಉದ್ಘಾಟನೆ ವೇಳೆ ವಾಗ್ವಾದ ವೇಳೇಯಲ್ಲಿ, ಏಕಾಏಕಿ ವೇದಿಕೆಗೆ ನುಗ್ಗಿ ಗಲಾಟೆ. ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಭಾಷಣದ ವೇಳೆ ಘಟನೆ ನಡೆದಿದೆ.

ರಾಯಚೂರು ನಗರದಲ್ಲಿ ನಡೆಯುತ್ತಿರೊ ಕಾರ್ಯಕ್ರಮದಲ್ಲಿ, ಸಚಿವ ಎಂಟಿಬಿ ನಾಗರಾಜ್ ರವರು ಬಿಜೆಪಿ ಸರ್ಕಾರದ ಅನುದಾನ ಅಂತ ಪದೇ ಪದೇ ಪ್ರಸ್ತಾಪಿಸಿದ್ದಕ್ಕೆ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅಭಿಮಾನಿಗಳು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 2016 ರಲ್ಲಿ ಕನಕನ ಪುತ್ಥಳಿ ಹಾಗೂ ಕಾಮಗಾರಿಗೆ‌ ಸಿದ್ದರಾಮಯ್ಯ ಕೊಡುಗೆ ಇದೆ.

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೆಸರೇ ಇಲ್ಲ. ಅವರ ಕೊಡುಗೆ ಪ್ರಸ್ತಾಪಿಸಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಕಾಲ ಸ್ಥಬ್ಧವಾಗಿದ್ದ ಕಾರ್ಯಕ್ರಮ, ಈ ವೇಳೆ ಕೂಡಲೇ ಅಲರ್ಟ್ ಆದ ಪೊಲೀಸರು ವಾಗ್ವಾದ ನಡೆಸಿದ ಇಬ್ಬರನ್ನ ವಶಕ್ಕೆ ಪಡೆದ ಪೊಲೀಸರು. ಈ ವೇಳೆ ಭಾಷಣ ಸ್ಥಗಿತಿಗೊಳಿಸಿ ಹೋದ ಎಂಟಿಬಿ. ನಂತರ ಈ ಬಗ್ಗೆ ಮತ್ತೆ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಶಾಸಕ.

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ರಿಂದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ನೀವು ಸಿದ್ದರಾಮಯ್ಯ ಹೆಸರನ್ನ ಪ್ರಸ್ತಾಪಿಸಬಹುದಿತ್ತು. ಇದೆಂಥಾ ಪ್ರೊಟೊಕಾಲ್ ಗೊತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Exit mobile version