Site icon PowerTV

ಓಲಾ, ಉಬರ್​ಗಳಿಗೆ ಸರ್ಕಾರ ಇಂದೇ ಮೂಗುದಾರ !

ಬೆಂಗಳೂರು : ಇಂದೇ ಓಲಾ ಉಬರ್​ಗಳಿಗೆ ಹೊಸ ದರ ಫಿಕ್ಸ್ ಆಗಲಿದ್ದು, ಓಲಾ, ಊಬರ್ ರ್ಯಾಪಿಡೋ ಹಾಗೂ ಆಟೋ ಯೂನಿಯನ್ ಸರ್ಕಾರ ಸಭೆ ಕರೆದಿದೆ.

ಸಾರಿಗೆ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಮಧ್ಯಾಹ್ನ 11.30ಕ್ಕೆ ಸಭೆ ನಡೆಯಲಿದ್ದು, 15 ದಿನದೊಳಗೆ ಹೊಸ ದರ ಫಿಕ್ಸ್ ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಈ ಹಿನ್ನೆಲೆ ಹೊಸ ದರ ಫಿಕ್ಸ್ ಮಾಡೋಕೆ ಮುಂದಾದ ಸರ್ಕಾರ, GST ಜೊತೆಗೆ ಹೊಸ ದರವನ್ನು ಸರ್ಕಾರ ಫಿಕ್ಸ್ ಮಾಡಲಿದೆ.

ಸದ್ಯ 2 ಕೀ ಮೀಟರ್ 30 ರೂ ನಿಗದಿ ಮಾಡಿರೋ ಸಾರಿಗೆ ಇಲಾಖೆ, ಆದರೆ, ಮಿನಿಮಮ್ ದರ ಎರಡು ಕಿ.ಮೀಗೆ 50 ರೂ ಹಾಗೂ ನಂತರದ ಪ್ರತೀ ಕಿ.ಮೀಗೆ 25 ರೂ ಡಿಮ್ಯಾಂಡ್ ಮಾಡಿರೋ ಓಲಾ,ಊಬರ್ ಕಂಪನಿಗಳು, ಈ ಬಗ್ಗೆ ಇಂದು ನಿರ್ಧಾರ ಮಾಡಿ ಹೊಸ ದರ ಫಿಕ್ಸ್ ಮಾಡಿ ಸರ್ಕಾರ ಆದೇಶ ಹೊರಡಿಸಲಿದೆ.

Exit mobile version