Site icon PowerTV

ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಆರ್ಹಾಳ ಗ್ರಾಮಸ್ಥರು

ಕೊಪ್ಪಳ: ಕೊಪ್ಪಳ ಗ್ರಾಮವೊಂದರಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಕೊನೆಗು ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆರ್ಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗಂಗಾವತಿ ತಾಲೂಕಿನ ಆರ್ಹಾಳ ಗ್ರಾಮದಲ್ಲಿ ಅಡಗಿದ್ದ ಚಿರತೆಯು, ಗ್ರಾಮದಲ್ಲಿ ಕುರಿ, ಮೇಕೆ ಹಾಗೂ ಮತ್ತೀತರ ಸಾಕು ಪ್ರಾಣಿಗಳನ್ನು ತನ್ನ ಆಹಾರವನ್ನಾಗಿಸಿಕ್ಕೊಂಡಿತ್ತು. ಈಗ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದೆ.

ಆರ್ಹಾಳ ಗ್ರಾಮದಲ್ಲಿ ಗುಡ್ಡದ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ, ಕೊನೆಗು ಸೆರೆಯಾಗಿದೆ. ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಆರ್ಹಾಳ ಗ್ರಾಮಸ್ತರು.

Exit mobile version