Site icon PowerTV

ಸ್ಟೇರಿಂಗ್ ಕಟ್​ ಆಗಿ ಬಸ್ ಪಲ್ಟಿ; 42 ಜನರಿಗೆ ಗಾಯ

ವಿಜಯಪುರ; ಬಸ್ ಸ್ಟೇರಿಂಗ್ ಕಟ್ ಆಗಿ ಬಸ್ ಪಲ್ಟಿಯಾದ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದ ಹೊರಭಾಗದ ಗಣಿಹಾರ ಸಿಂದಗಿ ಮಾರ್ಗದಲ್ಲಿ ನಡೆದಿದೆ.

ಬಸ್ ಚಲಿಸುತ್ತಿದ್ದ ವೇಳೆಯಲ್ಲಿ ಸ್ಟೇರಿಂಗ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು, ಬಸ್‌ ನಲ್ಲಿದ್ದ 43 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ ಆಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಬಸ್ ಸ್ಟೇರಿಂಗ್ ಕಟ್ ಆಗುತ್ತಿದ್ದಂತೆ ಚಾಲಕನ ಸಮಯ ಪ್ರಜ್ಞೆ ಭಾರೀ ಅನಾಹುತ ತಪ್ಪಿದೆ. ಗಾಯಗೊಂಡ ಪ್ರಯಾಣಿಕರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Exit mobile version