Site icon PowerTV

ಇಂದು ಪುನೀತ್ ರಾಜ್​ಕುಮಾರ್ ಪುಣ್ಯಸ್ಮರಣೆ

ಬೆಂಗಳೂರು : ಇಂದು ಅಪ್ಪು ಪುಣ್ಯಸ್ಮರಣೆ ಹಿನ್ನಲೆಯಲ್ಲಿ, ಕನ್ನಡ ಚಿತ್ರರಂಗದಿಂದ ನಟ ಪುನೀತ್​ ರಾಜ್​ಕುಮಾರ್​ಗೆ ಗೀತನಮನ ಸಲ್ಲಿಸಲಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿ ಗಾಯನ ಇದ್ದು, ಸಾಧು ಕೋಕಿಲ ನಿರ್ದೇಶನದಲ್ಲಿ ಕಾರ್ಯಕ್ರಮ ನಡೆಯಲಿದೆ. ನಿನ್ನೆ ರಾತ್ರಿ 12ರಿಂದ ಇಂದು ರಾತ್ರಿ 12ರವರೆಗೆ ಕಾರ್ಯಕ್ರಮ ನಡೆಯಲಿದೆ. ಬೇರೆ ಬೇರೆ ತಂಡಗಳಿಂದ ನಿರಂತರ ಗೀತ ಗಾಯನ, ಕನ್ನಡ ಚಿತ್ರರಂಗದಿಂದ ನಟ ಪುನೀತ್​ಗೆ ಗೀತನಮನ, ಫಿಲ್ಮ್​ಮ್ಯೂಸಿಕ್ ಅಸೋಸಿಯೇಷನ್​ನಿಂದ ಕಾರ್ಯಕ್ರಮ ಜರುಗಲಿದೆ.

ಇನ್ನು, ಕಂಠೀರವ ಬಳಿ 75 ಅಡಿ ಎತ್ತರದ ಅಪ್ಪು ಕಟೌಟ್​ಗೆ ಪೂಜೆ ಮಾಡಲಾಗಿದ್ದು, ಅಪ್ಪು ಅಭಿನಯದ ಎಲ್ಲಾ ಸಿನಿಮಾಗಳ ಕಟೌಟ್ ನಿರ್ಮಾಣ ಮಾಡಲಾಗಿದೆ.

Exit mobile version