Site icon PowerTV

ಹಂಪಿ ದೇವಾಲಯ ಬಳಿ ಆಕಸ್ಮಿಕ ಬೆಂಕಿಗೆ ಅಂಗಡಿ, ಹೋಟೆಲ್​ಗಳು ಸುಟ್ಟು ಭಸ್ಮ

ವಿಜಯನಗರ; ಆಕಸ್ಮಿಕ ಬೆಂಕಿ ಅಂಗಡಿಗಳು, ಹೋಟೆಲ್ ತಗುಲಿ ಸುಟ್ಟು ಭಸ್ಮ ಆಗಿರುವ ಘಟನೆ ವಿಶ್ವವಿಖ್ಯಾತ ಹಂಪಿಯಲ್ಲಿ ನಡೆದಿದೆ.

ಮೊದಲು ಬಟ್ಟೆ ಅಂಗಡಿಗೆ ಹೊತ್ತಿಕೊಂಡ ಬೆಂಕಿ, ಆ ಬಳಿಕ ಪಕ್ಕದ ಅಂಗಡಿಗಳು ಮತ್ತು ಛತ್ರಕ್ಕೆ ಹೊತ್ತಿಕೊಂಡಿದೆ. ಇನ್ನು ಬೆಂಕಿಯಿಂದ ಬ್ಲಾಸ್ಟ್ ಸಿಲಿಂಡರ್ ಗಳು ಆಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಹಂಪಿಯ ಜನತಾ ಪ್ಲಾಟ್ ನಲ್ಲಿರುವ ಅಂಗಡಿಗಳಿಗೆ ಮೊದಲು ಮ್ಯಾಂಗೋ ಟ್ರೀ ಹೊಟೇಲ್, ಅನ್ನಪೂರ್ಣೇಶ್ವರಿ ಛತ್ರ ಮತ್ತು ಬಟ್ಟೆ ಅಂಗಡಿಗೆ ಬೆಂಕಿ ತಗುಲಿದೆ. ನಂತರ ಸಿಲಿಂಡರ್ ಬ್ಲಾಸ್ಟ್ ಹೊಡೆತಕ್ಕೆ ಮ್ಯಾಂಗೋ ಟ್ರೀ ಹೊಟೇಲ್ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು.

ಇನ್ನು ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಹೊಟೇಲ್​ನಲ್ಲಿದ್ದ ಪ್ರಾಣಪಾಯಾದಿಂದ ಪಾರಾಗಿದ್ದಾರೆ. ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version