Site icon PowerTV

ರಿಲ್ಯಾಕ್ಸ್ ಮೂಡ್​ಗೆ ಜಾರಿದ ಮಾಜಿ ಸಿಎಂ ಸಿದ್ದರಾಮಯ್ಯ..!

ಮೈಸೂರು: ಸದಾ ರಾಜಕೀಯ ಜಂಜಾಟದಲ್ಲಿ ತೊಡಗಿಸಿಕ್ಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ವಲಯದಲ್ಲಿ ತಮ್ಮದೆ ಆದ ಅಭಿಮಾನಿಗಳ ಬಳಗವನ್ನು ರಾಜ್ಯಾದ್ಯಂತ ಹೊಂದಿದ್ದಾರೆ. ಮಾಜಿ ಸಿಎಂ ಸಿದ್ದು ಇಂದು ಕೊಂಚ ರಿಲ್ಯಾಕ್ಸ್ ಮೂಡ್ ನಲ್ಲಿ ತೊಡಗಿದರು.

ಮೈಸೂರಿನ ಪಾರ್ಕ್ ನಲ್ಲಿ ತಮ್ಮ ಆಪ್ತರ ಜೊತೆ ಇಂದು ವಾಕಿಂಗ್ ಮಾಡಿದ ಸಿದ್ದರಾಮಯ್ಯ ಅವರು, ಜಾಗಿಂಗ್ ಹಾಗೂ ಮೀಟಿಂಗ್ ಜೊತೆಗೆ ವಾಯುವಿಹಾರ ನಡೆಸಿದ್ದಾರೆ. ಬೆಳಗ್ಗೆ ವಾಕಿಂಗ್ ಸ್ಥಳಕ್ಕೆ ಆಗಮಿಸಿದ ಕೋಲಾರದ ಕಾಂಗ್ರೆಸ್ ಮುಖಂಡರು ನೀವು ಕೋಲಾರದಿಂದ ಸ್ಪರ್ಧೆ ಮಾಡಿ ಎಂದು ಮನವಿ ಮಾಡಿ, ಸಿದ್ದು ಅವರಿಗೆ ಬೃಹತ್ ಹಾರ ಹಾಕಿ ಸನ್ಮಾನಿಸಿದರು.

ನಗರದ ರಾಮಕೃಷ್ಣನಗರದ ಪಾರ್ಕ್​ನಲ್ಲಿ ವಾಕಿಂಗ್ ವೇಳೆ, ಸಿದ್ದರಾಮಯ್ಯ ಅವರನ್ನ ಕಂಡ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ನಗು ನಗುತ್ತಾ ಎಲ್ಲರೊಂದಿಗೆ ಫೋಟೋಗೆ ಫೋಸ್ ನೀಡಿದ ಸಿದ್ದರಾಮಯ್ಯ ಅವರು ಅಭಿಮಾನಿಗಳು ಹೆಚ್ಚಾದ ಹಿನ್ನೆಲೆಯಲ್ಲಿ, ವಾಕಿಂಗ್ ಅರ್ಧಕ್ಕೆ ನಿಲ್ಲಿಸಿ ಮನೆಗೆ ತೆರಳಿದರು.

Exit mobile version