Site icon PowerTV

ಅಪ್ಪು ನಟನೆಯ ‘ಗಂಧದಗುಡಿ’ ಫಸ್ಟ್​​​​ ಶೋ ಹೌಸ್​ಫುಲ್​​​​

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಡ್ರೀಮ್ ಪ್ರಾಜೆಕ್ಟ್ ಗಂಧದಗುಡಿ ಇಂದು ಗ್ರ್ಯಾಂಡ್ ರಿಲೀಸ್ ಆಗಿದ್ದು, ಸಿನಿಮಾದಲ್ಲಿ​ ಅಪ್ಪು ನೆನೆದು ಫ್ಯಾನ್ಸ್ ಕಣ್ಣೀರು ಹಾಕಿದ್ದಾರೆ.

ಇದು ಕಮರ್ಷಿಯಲ್ ಸಿನಿಮಾನ ಮೀರಿದ ಸಂದೇಶಾತ್ಮಕ ಡಾಕ್ಯುಮೆಂಟರಿ ಸಿನಿಮಾ ಆಗಿದ್ದು, ಅಮೋಘ ವರ್ಷ ನಿರ್ದೇಶನ ಮಾಡಿದ್ದು, ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

ಒಂದೂವರೆ ಗಂಟೆ ಸಮಯವಿರುವ ಗಂಧದಗುಡಿ ಚಿತ್ರ, ರೆಗ್ಯುಲರ್ ರಿಲೀಸ್ 10 ಗಂಟೆಗೂ ಮುನ್ನ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳಲ್ಲಿ 50 ಸ್ಪೆಷಲ್ ಶೋ ಇಂದು ರಿಲೀಸ್​ ಮಾಡಲಾಯಿತು. ಸಿಂಗಲ್ ಸ್ಕ್ರೀನ್‌ ಗಳಲ್ಲೂ ಮುಂಜಾನೆ 6 ರಿಂದಲೇ ಪ್ರದರ್ಶನ ಆರಂಭವಾಯಿತು. ಬೆಂಗಳೂರಿನ ಪ್ರಸನ್ನ್​ ಥೇಟರ್​​ ಬೆಳಿಗ್ಗೆಯ ಶೋ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ​

ನಿನ್ನೆ ರಾತ್ರಿ ಸೆಲೆಬ್ರಿಟಿ ಪ್ರೀಮಿಯರ್ ಶೋ ನೋಡಿ ಮೋಹಕ ತಾರೆ ರಮ್ಯಾ, ನಟ ಪ್ರೇಮ್, ನಟ ಪ್ರಜ್ವಲ್, ನಟ ಅಜಯ್ ರಾವ್, ಸಂಗೀತಾ ಶೃಂಗೇರಿ, ಇನ್ಫೋಸಿಸ್​ ಸುಧಾಮೂರ್ತಿ ಅವರು ಸೇರಿ ಅನೇಕರು ಗಂಧದಗುಡಿಯ ಪ್ರಕೃತಿ ಸೊಗಡು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version