Site icon PowerTV

ಅಪ್ಪು ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆದ ನಟಿ ಮಾಲಾಶ್ರೀ

ಬೆಂಗಳೂರು; ರಾಜ್ಯಾದ್ಯಂತ ಇಂದು ನಟ ಅಪ್ಪು ಅಭಿನಯದ ಗಂಧದ ಗುಡಿ ಸಿನಿಮಾ ರಿಲೀಸ್​ ಆಗಿದ್ದು ಎಲ್ಲೆಡೆ ಪಾಸಿಟಿವ್​ ರೆಸ್ಪಾನ್ಸ್​ ವ್ಯಕ್ತವಾಗುತ್ತಿದೆ.

ಅದರಂತೆ ಇಂದು ಕಂಠೀರವ ಸ್ಟುಡಿಯೋಗೆ ಹಿರಿಯ ನಟಿ ಮಾಲಾಶ್ರೀ ಆಗಮಿಸಿ, ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅವರ ಸಮಾಧಿಗೆ ತೆರಳಿ ದರ್ಶನ ಪಡೆದರು. ಬಳಿಕ ಮಾತನಾಡಿದ ಮಾಲಾಶ್ರೀ, ಅಪ್ಪು ಅವರ ಗಂಧದ ಗುಡಿ ಸಿನಿಮಾ ದೊಡ್ಡ ಸಕ್ಸಸ್ ಕಂಡಿದೆ ಎಂದರು.

ರಾಜ್ಯದ ಎಲ್ಲರೂ ಗಂಧದ ಗುಡಿ ಸಿನಿಮಾ ನೋಡಬೇಕು ನೋಡಿ, ಅಪ್ಪು ಇಲ್ಲ ಅಂತಾ ಹೇಳೋಕೆ ಸಾಧ್ಯ ಆಗುತ್ತಿಲ್ಲ. ನಾಳೆ ಅಪ್ಪು ಇರದೇ ಒಂದು ವರ್ಷ ಆಗ್ತಾ ಇದೆ. ಅವರು ನಮ್ಮ ಜೊತೆ ಇಲ್ಲ ಅಂತಾ ಹೇಳೋಕೆ ಸಾಧ್ಯ ಆಗ್ತಾ ಇಲ್ಲ. ಅಪ್ಪು ಸದಾ ನಮ್ಮ ಜೊತೆ ಇರ್ತಾರೆ ಎಂದು ಮಾಲಾಶ್ರೀ ತಿಳಿಸಿದರು.

ಗಂಧದಗುಡಿ ಸಿನಿಮಾಗೆ ಜನರಿಂದ ಫುಲ್ ಮಾರ್ಕ್ಸ್ ವ್ಯಕ್ತವಾಗುತ್ತಿದ್ದು, ಪುನೀತ್ ‌ಅಂದ್ರೆ ಪ್ರಕ್ರತಿ, ಪ್ರಕ್ರತಿ ಅಂದ್ರೆ ಪುನೀತ್ ಎಂದು ಸಿನಿಮಾ ಬಗ್ಗೆ ಜನರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Exit mobile version