Site icon PowerTV

ಡಿಕೆಶಿ ತುಳಿದು ಸಿದ್ದರಾಮಯ್ಯ ರಾಜಕಾರಣ ಮಾಡ್ತಿದ್ದಾರೆ: ಶ್ರೀರಾಮುಲು

ಚಾಮರಾಜನಗರ; ಬೇರೆಯವರು ಕಟ್ಟುವ ಗೂಡಿನಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡೋದು, ಅವರಿವರನ್ನ ತುಳಿದು ಸಿದ್ದರಾಮಯ್ಯ ರಾಜಕಾರಣ ಮಾಡುತ್ತಾರೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಜಿಲ್ಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ, ಜಿ. ಪರಮೇಶ್ವರ್ ಅವರನ್ನು ತುಳಿದ್ದಾಗಿದೆ. ಈಗ ಡಿಕೆಶಿ ಅವರನ್ನ ಸಿದ್ದರಾಮಯ್ಯ ತುಳಿಯಲು ಹೊರಟಿದ್ದಾರೆ. ಯಾವುದೇ ಶ್ರಮ ಹಾಕದೇ ಅವರಿವರು ಕಟ್ಟೋ ಗೂಡಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಾರೆ ಎಂದು ಆರೋಪ ಮಾಡಿದರು.

ಇನ್ನು ಜಾತಿಗಳ ಹೆಸರು, ಮಹಾನ್ ಪುರುಷರ ಹೆಸರು ಹೇಳಿಕೊಂಡು ರಾಜಕಾರಣ ಸಿದ್ದರಾಮಯ್ಯ ಅವರು ಮಾಡುತ್ತಾರೆ. ಅವರ ಸರ್ಕಾರ ಇದ್ದಾಗ ಮೀಸಲಾತಿ ಕೊಡಲಿಲ್ಲ. ಈಗ ಪ್ರೊತ್ಸಾಹ ಕೊಟ್ಟೆವು, ಸಲಹೆ ಕೊಟ್ಟೆವು ಎನ್ನುತ್ತಾರೆ ಎಂದರು.

ಮೀಸಲಾತಿ ಹೆಚ್ಚು ಮಾಡಬೇಕೆಂಬ ಇಚ್ಛಾಶಕ್ತಿಯೇ ಅವರಲ್ಲಿ ಇರಲಿಲ್ಲ. ಕಾನೂನು ಬದ್ಧವಾಗಿ ಏನನ್ನು ಮಾಡಬೇಕೊ ಎಲ್ಲಾ ಕ್ರಮಗಳನ್ನು ಬೊಮ್ಮಾಯಿ ಸರ್ಕಾರ ತೆಗೆದುಕೊಂಡಿದ್ದು ಈಗಾಗಲೇ ನಾವು ಹೊಸ ಮೀಸಲಾತಿಯಲ್ಲಿದ್ದೇವೆ. ಕಾನೂನುತ್ಮಾಕವಾಗಿ ಗಟ್ಟಿಗೊಳಿಸುತ್ತಿದ್ದೇವೆ, ಮೀಸಲಾತಿ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ ಎಂದರು.

ಇನ್ನು ದೇಶದಲ್ಲಿ ಕಾಂಗ್ರೆಸ್​ನ್ನ ಜನರು ತಿರಸ್ಕರಿಸಿದ್ದು ಕರ್ನಾಟಕದಲ್ಲೂ ಈ ಬಾರಿ ಎಲ್ಲಾ ಸಮುದಾಯವು ಕಾಂಗ್ರೆಸ್ ನ್ನು ತಿರಸ್ಕರಿಸಲಿದೆ ಎಂದು ರಾಮುಲು ಹೇಳಿದರು.

Exit mobile version