Site icon PowerTV

ಸಚಿವ ಆರ್ ಅಶೋಕ್ ಹೇಳಿಕೆಗೆ ಎಚ್​ಡಿಕೆ ಆಕ್ರೋಶ

ಬೆಂಗಳೂರು: ಈಗಾಗಲೇ SC-ST ಮೀಸಲಾತಿ ಕುರಿತು ರಾಜ್ಯದೆಲ್ಲೆಡೆ ಸಾಕಷ್ಟು ಚರ್ಚೆಯಾಗುತ್ತಿದೆ. SC-ST ಮೀಸಲಾತಿ ನಮ್ಮ ಗಂಡೆದೆ ಸಿಎಂ ಬೊಮ್ಮಾಯಿ ಅವರಿಂದ ಮಾತ್ರ ಕೊಡೋಕೆ ಆಯ್ತು ಎಂಬ ಸಚಿವ ಅಶೋಕ್ ಹೇಳಿಕೆ ವಿಚಾರ, ಈಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ಈ ಕುರಿತು ಅಶೋಕ್ ವಿರುದ್ದ ಮಾಜಿ ಸಿಎಂ ಕುಮಾರಸ್ವಾಮಿ ವಾಕ್ ಸಮರ ನಡೆಸಿದ್ದು, ಮೀಸಲಾತಿ ವಿಚಾರದಲ್ಲಿ ಈಗ ಏನಾಗಿದೆ.‌ ನಿಮ್ಮ ಗಂಡೆದೆ ಮುಖ್ಯಮಂತ್ರಿ ಆಗಿದ್ದವರು,‌ ಎರಡು ವರ್ಷ ಯಾಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಕೇವಲ ಇದೊಂದು ಚುನಾವಣೆ ಸ್ಟಂಟ್ ಅಷ್ಟೆ.

ಈ ಹಿಂದೆ ST ಸಮುದಾಯಕ್ಕೆ ಮೀಸಲಾತಿ ಅಂತ ಕೊಟ್ಟವರು ಮಾಜಿ ಪ್ರಧಾನಿ ದೇವೇಗೌಡರು. ದೆವೇಗೌಡರ ಮುಂದೆ ಯಾವುದೇ ಗಂಡೆದೆ ಮುಖ್ಯಮಂತ್ರಿ ಇಲ್ಲ. ಇವರಿಗೆ ಗಂಡೆದೆ ಇದ್ದಿದ್ದರೆ ಶ್ರೀಗಳನ್ನ ಯಾಕೆ 252 ದಿನ ಧರಣಿ ಕೂರಿಸುತ್ತಿದ್ದರು. ಮೀಸಲಾತಿಗೆ ನಮ್ಮ ಸಹಕಾರವೂ ಇದೆ. ನಮ್ಮ ಸಹಕಾರದಿಂದ ಇವತ್ತು ಅವರ ಗಂಡೆದೆ ಹೊರ ಬಂದಿದೆ. ಇಲ್ಲದೆ ಹೋಗಿದ್ದರೆ ಹೆಣ್ಣೆದೆ ಹೊರಗೆ ಬರುತಿತ್ತು ಎಂಬ ಪದ ಬಳಕೆ ಮಾಡಿದ ಕುಮಾರಸ್ವಾಮಿ ರವರು, ತಕ್ಷಣವೇ ಎಚ್ಚೆತ್ತ ಮಾಜಿ ಸಿಎಂ ಕುಮಾರಸ್ವಾಮಿ. ವಿಪಕ್ಷಗಳು ಸಹಕಾರ ಕೊಟ್ಟ ಕಾರಣ ಇವತ್ತು ಗಂಡೆದೆ ಹೊರಗೆ ಬಂದಿದೆ ಎಂಬ ಹೇಳಿಕೆ ನೀಡಿದ್ದಾರೆ.

Exit mobile version