Site icon PowerTV

ಇಂದು ಪಂಚರತ್ನ ರಥಯಾತ್ರೆಗೆ ಹೆಚ್​ಡಿಕೆ ಚಾಲನೆ

ಬೆಂಗಳೂರು : 2023ರ ಚುನಾವಣೆಗೆ ಜೆಡಿಎಸ್ ಮೆಗಾ ಪ್ಲ್ಯಾನ್ ಮಾಡಲಾಗಿದ್ದು, ಇಂದು ಪಂಚರತ್ನ ರಥಯಾತ್ರೆಗೆ ಹೆಚ್​ಡಿಕೆ ಚಾಲನೆ ನೀಡಲಿದ್ದಾರೆ.

ಬೆಳಗ್ಗೆ ಪಂಚರತ್ನ ಕಾರ್ಯಕ್ರಮವನ್ನು, ಗವಿಗಂಗಾಧರೇಶ್ವರ ದೇಗುಲದಿಂದ ಚಾಲನೆಗೊಳ್ಳುತ್ತಿದ್ದು, 2023ರ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿದೆ. ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ, ಆರೋಗ್ಯ, ಪಂಚರತ್ನ ಯೋಜನೆ ಕುರಿತು ಜನರಲ್ಲಿ ಜಾಗೃತಿ ಮಾಡಿಸಲಿದ್ದಾರೆ.ಇನ್ನು, ನವೆಂಬರ್‌ 1ರಂದು ಮೊದಲ ಹಂತದ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಎಲ್ಲೆಲ್ಲಿ ಪಂಚರತ್ನ ಯಾತ್ರೆ
ನ. 1 ರಿಂದ 5 ರವರೆಗೆ ಕೋಲಾರ ಜಿಲ್ಲೆಯಲ್ಲಿ ಪ್ರವಾಸ
ನ. 6 ರಿಂದ 10 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆ
ನ. 11 ರಿಂದ 13 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ
ನ. 14 ರಿಂದ 23 ರವರೆಗೆ ತುಮಕೂರು ಜಿಲ್ಲೆ
ನ. 24 ರಿಂದ 30 ರವರೆಗೆ ಹಾಸನ ಜಿಲ್ಲೆ
ಡಿ. 2 ರಿಂದ 5 ರವರೆಗೆ ರಾಮನಗರ ಜಿಲ್ಲೆಯಲ್ಲಿ ಸಂಚಾರ
ಮೊದಲ ಹಂತದಲ್ಲಿ 35 ದಿನಗಳು ಪ್ರವಾಸ ಮಾಡಲಿರುವ HDK

Exit mobile version