Site icon PowerTV

ಪೊಲೀಸ್ ಇನ್ಸ್‌ಪೆಕ್ಟರ್ ಸಾವು; ಅಳಿಯನ ಶವ ನೋಡಲು ಆಸ್ಪತ್ರೆಗೆ ಬಂದ ಹೆಚ್.​ ವಿಶ್ವನಾಥ್​.!

ಬೆಂಗಳೂರು; ಬೆಂಗಳೂರಿನ ಕೆ.ಆರ್.ಪುರಂನ ಖಾಸಗಿ ಆಸ್ಪತ್ರೆಯೊಂದರಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಇತ್ತೀಚೆಗೆ ಪಬ್ ವೊಂದರ ಅವಧಿ ಮೀರಿ ನಡೆಸಲು ಸಹಕಾರ ನೀಡುತ್ತಿದ್ದರೆಂಬ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ ಅಮಾನತುಗೊಂಡಿದ್ದರು. ಅಮಾನತುಗೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೈಸೂರಿನ ಹುಣಸೂರು ಮೂಲದ ನಂದೀಶ್ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು.

ಇನ್ನು ಮೂಲತಃ ಹುಣಸೂರು ಮೂಲರಾದ ಮೃತ ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ ಅವರು ಎಂಎಲ್​ಸಿ ಹೆಚ್​ ವಿಶ್ವನಾಥ್​ ಅಳಿಯರಾಗಿದ್ದು, ಅಳಿಯನ ಶವ ನೋಡಲು ಲಕ್ಷ್ಮೀ ಆಸ್ಪತ್ರೆಗೆ ಎಂಎಲ್ ಸಿ ವಿಶ್ವನಾಥ್ ಬಂದರು.

Exit mobile version