Site icon PowerTV

ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಸಾವು.!

ವಿಜಯಪುರ; ವಿಷದ ಹಾವು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೇ ನಾಲ್ಕು ತಿಂಗಳ ಗರ್ಭಿಣಿ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಕುಂಟೋಜಿ ಗ್ರಾಮದಲ್ಲಿ ನಡೆದಿದೆ.

ಎರಡು ಮಕ್ಕಳ ತಾಯಿ ನಿರ್ಮಲಾ ಯಲ್ಲಪ್ಪ ಚಲವಾದಿ (25) ಅವರು ಮನೆಯಲ್ಲಿ ಮಲಗಿದ ಸಮಯದಲ್ಲಿ ಹಾವು ಕಚ್ಚಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತ ನಿರ್ಮಲಾ ಯಲ್ಲಪ್ಪ ಚಲವಾದಿಗೆ ಪತಿ, 1ಗಂಡು 1ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಈ ಘಟನೆ ಮುದ್ದೇಬಿಹಾಳ ಪೊಲೀಸ್​ ವ್ಯಾಪ್ತಿಯಲ್ಲಿ ನಡೆದಿದೆ.

Exit mobile version