Site icon PowerTV

ಯುಪಿ ಮಾಜಿ ಮಂತ್ರಿ ಅಜಂ ಖಾನ್​ಗೆ 3 ವರ್ಷ ಜೈಲು ಶಿಕ್ಷೆ ಪ್ರಕಟ

ಉತ್ತರ ಪ್ರದೇಶ; ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ನಾಯಕ, ಯುಪಿ ಮಾಜಿ ಮಂತ್ರಿ ಅಜಂ ಖಾನ್ ಅವರಿಗೆ ನ್ಯಾಯಾಲಯ ಇಂದು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಅಜಂಖಾನ್​ ದೇಶದಲ್ಲಿ ಮುಸ್ಲಿಮರು ಅಸ್ತಿತ್ವದಲ್ಲಿರಲು ಕಷ್ಟಪಡುವ ವಾತಾವರಣವನ್ನು ಪ್ರಧಾನಿ ನಿರ್ಮಿಸುತ್ತಿದ್ದಾರೆ ಎಂದಿದ್ದರು. ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರಿಗೆ ಯುಪಿಯ ರಾಂಪುರ ವಿಶೇಷ ಕೋರ್ಟ್​ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅಜಂ ಖಾನ್ ಸೇರಿ ಇನ್ನೀಬ್ಬರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಜತೆಗೆ 25,000 ರೂ ದಂಡವನ್ನೂ ವಿಧಿಸಿ ಕೋರ್ಟ್​ ತೀರ್ಪು ನೀಡಿದೆ.

ಈ ಹಿಂದೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ನಂತರ ಮೇ ತಿಂಗಳಲ್ಲಿ ಅಜಂ ಖಾನ್ ಜೈಲಿನಿಂದ ಬಿಡುಗಡೆಗೊಂಡಿದ್ದರು.

Exit mobile version